ಸೋಮವಾರಪೇಟೆ, ಆ. 6: ಸಮೀಪದ ಮಾದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಎಂ. ಪುಟ್ಟಪ್ಪ ಅವರನ್ನು ಶಾಲಾಡಳಿತ ಮಂಡಳಿ ವತಿಯಿಂದ ಬೀಳ್ಕೊಡಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷೆ ಸವಿತ, ಗ್ರಾ.ಪಂ. ಸದಸ್ಯರಾದ ಉಮೇಶ್, ಮಜೀದ್, ಬೆಳ್ಳಿಯಪ್ಪ, ಅಕ್ಷರ ದಾಸೋಹ ಅಧಿಕಾರಿ ಹೇಮಂತ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಸಂತ್‍ಕುಮಾರ್, ನಿವೃತ್ತ ಶಿಕ್ಷಕ ಜೋಯಪ್ಪ, ಪ್ರಮುಖರಾದ ಹಸೈನಾರ್, ಗೀತಾ ಪುಟ್ಟಪ್ಪ ಸೇರಿದಂತೆ ಶಿಕ್ಷಕ ವರ್ಗದವರು, ನಿವೃತ್ತ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಿ ಬೀಳ್ಕೊಟ್ಟರು.