ಕೂಡಿಗೆ, ಆ. 6: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಮ್ಮನಕೊಲ್ಲಿ ಬಸವೇಶ್ವರ ದೇವಾಲಯದ ಹತ್ತಿರ ರಾತ್ರಿ ಸಮಯದಲ್ಲಿ ತಿರುಗಾಡುತ್ತಿದ್ದ ಮೂವರು ಅನುಮಾನಸ್ಪದ ವ್ಯಕ್ತಿಗಳಾದ , ರಾಮನಾಥÀಪುರ ಮೂಲದ ವ್ಯಕ್ತಿಗಳಾದ ಶರತ್, ದೀಲಿಪ್ ಕೃಪ್ಣ, ಎಂಬವರನ್ನು ರಾತ್ರಿಯಲ್ಲಿ ಗಸ್ತು ನಿರತರಾಗಿದ್ದ ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಇವರುಗಳು ಕುಶಾಲನಗರ ಗಣಪತಿ ರಥೋತ್ಸವ ಸಂದÀರ್ಭ ಮಹಿಳೆಯೊಬ್ಬರ 25 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನದ ಸರ, ಕಳ್ಳತನ, ಶಿರಂಗಾಲ ಪ್ರಾಥಮಿಕ ಶಾಲೆ ಮತ್ತು ಕೂಡುಮಂಗಳೂರು ಅಂಗನವಾಡಿ ಕೇಂದ್ರದಲ್ಲಿ 3 ಗ್ಯಾಸ್ ಸಿಲಿಂಡರಗಳನ್ನು ಕಳ್ಳತನ ಮಾಡಿರುವದನ್ನು ಒಪ್ಪಿಕೊಂಡಿದ್ದಾರೆ. ಇವರುಗಳ ಮೇಲೆ ಕೇಸ್ ದಾಖಲು ಮಾಡಲಾಗಿ ಇವರುಗಳನ್ನು ಬಂದಿಸಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ಜಗದೀಶ್ ತಿಳಿಸಿರುತ್ತಾರೆ.