ಗುಡ್ಡೆಹೊಸೂರು, ಆ. 6: ಇಲ್ಲಿನ ನಿವಾಸಿ ಕುಕ್ಕನೂರು ಲೀಲಾವತಿ ರಾಮಣ್ಣ ಅವರನ್ನು ಹೆಬ್ಬಾಲೆಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಮಂಗಳೂರು ಮತ್ತು ಕೊಡಗಿನ ವಿವಿಧ ಭಾಗಗಳಲ್ಲಿ ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ಇದೀಗ ಕೂಡಿಗೆ ಮತ್ತು ಹೆಬ್ಬಾಲೆ ವಿಭಾಗದಲ್ಲಿ ಹಿರಿಯ ಆರೋಗ್ಯ ಸಹಾಯಕಿ ಅಧಿಕಾರಿಯಾಗಿ ನಿವೃತ್ತಿಗೊಂಡ ಅವರನ್ನು ಇಲಾಖಾ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಅಲ್ಲಿನ ವೈದ್ಯಾಧಿಕಾರಿ ಡಾ. ಭರತ್‍ಕುಮಾರ್, ಆರೋಗ್ಯ ಸಹಾಯಕಿಯರಾದ ವೇದಾವತಿ, ಕಲಾವತಿ, ರಾಧ, ಅಕ್ಕಮ್ಮ ಮತ್ತು ಸಿಬ್ಬಂದಿಗಳು ಹಾಜರಿದ್ದರು.