ಶನಿವಾರಸಂತೆ, ಆ. 6 : ಪಟ್ಟಣದ ಸೆಸ್ಕಾಂಗೆ ಅಳವಡಿಸಿರುವ ನೂತನ ಕರೆಂಟ್ ಬಿಲ್ ಕಟ್ಟುವ ಯಂತ್ರವನ್ನು (ಎ.ಟಿ.ಪಿ.) ಕಿರಿಯ ಸಂಪರ್ಕಾಧಿಕಾರಿ ಹೇಮಂತ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಗ್ರಾಹಕರು ಇನ್ನು ಮುಂದೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಬಿಲ್ ಪಾವತಿಸಬಹುದು. ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಯಂತ್ರದ ಬಳಿ ಇರುವ ಆಪರೇಟರ್ ಗ್ರಾಹಕರಿಂದ ಹಣ ಪಡೆದು ಬಿಲ್ ಕಟ್ಟಿಸಿಕೊಳ್ಳುತ್ತಾರೆ ಎಂದರು. ವಿದ್ಯುತ್ ಇಲಾಖೆ ಸಿಬ್ಬಂದಿ ಹಾಜರಿದ್ದರು.