ಸೋಮವಾರಪೇಟೆ, ಆ. 6: ಯಡೂರು ಗ್ರಾಮದ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದÀರ್ಜೆ ಕಾಲೇಜಿನಲ್ಲಿ ಕಳೆದ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ. ಕಮಲಾಕ್ಷ ಬಲ್ಯಾಯ ಅವರನ್ನು ಕಾಲೇಜಿನ ವತಿ ಯಿಂದ ಬೀಳ್ಕೊಡ ಲಾಯಿತು. ಕಾಲೇಜಿನ ಪ್ರಾಂಶು ಪಾಲ ಪ್ರೊ. ಶ್ರೀಧರ್, ಹಿರಿಯ ಪ್ರಾಧ್ಯಾಪಕರುಗಳಾದ ಬಿ.ಎಂ. ಪ್ರವೀಣ್‍ಕುಮಾರ್, ಹೆಚ್.ಎನ್. ರಾಜು, ಕೆ.ಹೆಚ್. ಧನಲಕ್ಷ್ಮಿ, ಇಂಗ್ಲೀಷ್ ಪ್ರಾಧ್ಯಾಪಕ ಶಿವಮೂರ್ತಿ, ಕಚೇರಿ ಸಿಬ್ಬಂದಿ ಬಿ.ಟಿ. ರವಿ, ಜವರಪ್ಪ, ಗುರುಸೋಮಪ್ಪ ಮತ್ತಿತರರು ಉಪಸ್ಥಿತರಿದ್ದರು.