ಕರಿಕೆ, ಆ. 6: ಕರಿಕೆ ಗ್ರಾಮ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಗ್ರಾಮ ಸಮಿತಿ ಅಧÀ್ಯಕ್ಷ ಹೊಸಮನೆ ಹರೀಶ್ ಅವರ ಅಧÀ್ಯಕ್ಷತೆಯಲ್ಲಿ ಜಿ.ಪಂ. ಸದಸೆÀ್ಯ ಕವಿತಾ ಪ್ರಭಾಕರ ಅವರ ನಿವಾಸದಲ್ಲಿ ನಡೆಯಿತು.

ಸಭೆಯಲ್ಲಿ ಆಗಸ್ಟ್ ಹತ್ತೊಂಭತ್ತರಂದು ನಡೆಯಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಲಾಯಿತು.

ನಂತರ ಚುನಾವಣೆಯಲ್ಲಿ ಹನ್ನೆರಡು ಸ್ಥಾನಗಳನ್ನು ಗೆಲ್ಲಲು ಕಾರ್ಯಕರ್ತರು ಪ್ರಯತ್ನ ಮಾಡಬೇಕೆಂದು ಅಧÀ್ಯಕ್ಷರು ಮನವಿ ಮಾಡಿದರು. ಸಭೆಯಲ್ಲಿ ಜಿ.ಪಂ. ಸದಸ್ಯರಾದ ಕವಿತಾ ಪ್ರಭಾಕರ್, ಪ್ರಮುಖರಾದ ಐಸಾಕ್, ಬಾಲಕೃಷ್ಣ, ಜಯಂತ, ರಾಜೇಂದ್ರ ಬೂತ್ ಸಮಿತಿ ಅಧ್ಯಕ್ಷರು ಅನೇಕ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ವಿಜಯ ಸ್ವಾಗತಿಸಿ, ವಂದಿಸಿದರು.