ಮಡಿಕೇರಿ, ಆ. 6: ದೇಶದ ಖ್ಯಾತರಂಗ ನಿರ್ದೇಶಕ ಬಿ.ವಿ. ಕಾರಂತರ ನೆನಪಿನಲ್ಲಿ ಕನ್ನಡ ಚಲನಚಿತ್ರ ನಿರ್ದೇಶಕರು, ಹಲವು ಪ್ರಶಸ್ತಿ ವಿಜೇತರೂ ಆಗಿರುವ ಟಿ. ಎಸ್. ನಾಗಾಭರಣ ಅವರ ನೇತೃತ್ವದ ‘ಬೆನಕ’ ತಂಡದ ವತಿಯಿಂದ ಪ್ರತಿ ವರ್ಷ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಅದೇ ರೀತಿ ಈ ಬಾರಿ ‘ಬಿ.ವಿ. ಕಾರಂತರಂಗಗೀತೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಬಿ.ವಿ. ಕಾರಂತರ ರಚನೆ ಹಾಗೂ ಸಂಗೀತ ಸಂಯೋಜನೆಯ ರಂಗ ಗೀತ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾಗಿ ರಂಗಭೂಮಿ ಕಲಾವಿದ ಮಾದೇಟಿರ ಬೆಳ್ಯಪ್ಪ ಅವರನ್ನು ನೇಮಿಸಲಾಗಿದೆ.

ಸ್ಪರ್ಧೆ ತಾ. 30ರ ಒಳಗಾಗಿ ಮಡಿಕೇರಿಯಲ್ಲಿ ಜರುಗಲಿದ್ದು, ಜಿಲ್ಲೆಯ ಆಸಕ್ತ ರಂಗ ತಂಡಗಳು ಭಾಗವಹಿಸಬಹುದಾಗಿದೆ. ಭಾಗವಹಿಸಲಿಚ್ಚಿಸುವ ತಂಡಗಳಿಗೆ ರಂಗಗೀತೆಯ ಸಾಹಿತ್ಯ ಹಾಗೂ ಗೀತೆಯ ಧ್ವನಿಮುದ್ರಿತ ಸಿ.ಡಿ.ಗಳನ್ನು ನೀಡಲಾಗುವದು.ಸಿ.ಡಿ.ಯಲ್ಲಿ 17 ಕನ್ನಡ ಹಾಡುಗಳಿದ್ದು, ತಂಡಗಳು ಅವುಗಳಲ್ಲಿ ಆಯ್ಕೆ ಮಾಡಿಕೊಂಡು ಒಂದು ತಂಡ 5 ಹಾಡುಗಳನ್ನು ಸಂಗೀತ ಪರಿಕರಗಳೊಂದಿಗೆ ಸ್ಪರ್ಧೆಯಲ್ಲಿ ಹಾಡಬೇಕಾಗುತ್ತದೆ. 9 ಹಿಂದಿ ಗೀತೆಗಳಿದ್ದು, ಅವುಗಳಲ್ಲಿ ಕನಿಷ್ಟ 3 ಹಾಡುಗಳನ್ನು ಹಾಡಬಹುದಾಗಿದೆ. ಸ್ಪರ್ಧೆಯ ದಿನದಂದು ತೀರ್ಪುಗಾರರ ಮೂಲಕ ಆಯ್ಕೆಯಾದ ತಂಡ ಸೆಪ್ಟೆಂಬರ್ 23ರಂದು ಬೆಂಗಳೂರಿನಲ್ಲಿ ಜರುಗಲಿರುವ ರಾಜ್ಯಮಟ್ಟದ ರಂಗ ಗೀತೋತ್ಸವದಲ್ಲಿ ಭಾಗವಹಿಸಲು ಅವಕಾಶ ಲಬಿಸಲಿದೆ. ಜಿಲ್ಲೆಯ ಆಸಕ್ತ ರಂಗ ತಂಡಗಳು ತಾ. 10ರÀ ಒಳಗಾಗಿ ಮಾಹಿತಿ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಾದೇಟಿರ ಪಿ. ಬೆಳ್ಯಪ್ಪ, (9482815760), ಸುಬ್ರಾಯ ಸಂಪಾಜೆ, (9448647191), ಮೇಘಾ ರೇವಂಕರ್, (8904141832) ಇವರುಗಳನ್ನು ಸಂಪರ್ಕಿಸಬಹುದಾಗಿದೆ.