ವೀರಾಜಪೇಟೆ, ಆ. 6: ಪ್ರತಿನಿತ್ಯ ಯೋಗಭ್ಯಾಸ ನಡೆಸುವದರಿಂದ ಉತ್ತಮ ಆರೋಗ್ಯ ಹಾಗೂ ದೇಹದ ಸಮತೋಲನವನ್ನು ಕಾಪಾಡಿಕೊಂಡು ಬರಬಹುದು ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅರಮೇರಿ ಎಂಎಂಎಸ್ ವಿದ್ಯಾಪೀಠದಲ್ಲಿ ಹೊಂಬೆಳಕು ಹಾಗೂ ಲಯನ್ಸ್ ಕ್ಲಬ್ ಆಯೋಜಿಸಲಾಗಿದ್ದ ಯೋಗ ಶಿಬಿರದಲ್ಲಿ ಮಾತನಾಡಿ ಯೋಗವು ಇಡಿ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಮಾನಸಿಕ ಒತ್ತಡ ಹಾಗೂ ಉತ್ತಮ ಆರೋಗ್ಯ ಕಂಡುಕೊಳ್ಳಲು ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಕೂಡ ಯೋಗಾಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಿದರು.
ಶಿಬಿರದಲ್ಲಿ ಯೋಗ ಗುರು ಚಂದ್ರಪ್ಪ ಮಾಸ್ಟರ್, ಲಕ್ಷ್ಮಿ ನಾರಾಯಣ್, ಲಯನ್ಸ್ ಕ್ಲಬ್‍ನ ಅಧ್ಯಕ್ಷ ತೀಶು ಗಣಪತಿ, ಕಾರ್ಯದರ್ಶಿ ಪ್ರಧಾನ್, ಖಜಾಂಜಿ ನಿಯಾಸ್, ಎಂಸ್‍ಎಂಎಸ್ ವಿದ್ಯಾಪೀಠದ ಪ್ರಾಂಶುಪಾಲೆ ಕುಸುಂ ಉಪಸ್ಥಿತರಿದ್ದರು.