ಮಡಿಕೇರಿ, ಆ.13 :ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಾ. 15 ರಂದು ಬೃಹತ್ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಲು ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮುಂದಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ (ಮೊದಲ ಪುಟದಿಂದ) ಸಂಪತ್ ಕುಮಾರ್, ಧ್ವಜದ ವಿಶೇಷತೆಯ ಕುರಿತು ಮಾಹಿತಿ ನೀಡಿದರು. 40 ಮೀಟರ್ ಉದ್ದ, 1.60 ಮೀಟರ್ ಅಗಲ ಹೊಂದಿರುವ ರಾಷ್ಟ್ರ ಧ್ವಜ 10.50 ಕೆ.ಜಿ. ತೂಕವಿದ್ದು, 40 ಅಡಿ ಎತ್ತರದಲ್ಲಿ ಆರೋಹಣ ಮಾಡಲಾಗುವದೆಂದರು.ತಾ.15 ರಂದು ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭ ಮಾಜಿ ಸೈನಿಕರನ್ನು ಹಾಗೂ ಕೊಡಗಿನ ಮಳೆಹಾನಿ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದ ಬಾಲಕ ಫತಾಹ್‍ನನ್ನು ಸನ್ಮಾನಿಸಿ ಗೌರವಿಸಲಾಗುವದೆಂದರು. ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ಮಾಲೀಕ ಅಬ್ದುಲ್ ಸಲಾಂ ರಾವತ್ತಾರ್ ಹಾಗೂ ಸಿಬ್ಬಂದಿಗಳು ವಿಜೃಂಭಣೆಯಿಂದ ರಾಷ್ಟ್ರೀಯ ಹಬ್ಬವನ್ನು ಆಚರಿಸುತ್ತಿರುವದಾಗಿ ಸಂಪತ್ ಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವರ್ತಕರಾದ ಕೆ.ಇ. ಮೈಸಿ, ಎಂ.ಎಸ್. ಸಲೀಂ ಹಾಗೂ ಶೆಹರಿಯಾರ್ ಉಪಸ್ಥಿತರಿದ್ದರು.