ಗೋಣಿಕೊಪ್ಪ ವರದಿ, ಆ. 14 : ಅಪರಿಚಿತ ವಾಹನ ಡಿಕ್ಕಿಯಾಗಿ ಕಾರ್ಮಿಕ ಸಾವನಪ್ಪಿರುವ ಘಟನೆ ಸುಳುಗೋಡು ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಅಲ್ಲಿನ ಪಂಜರಿ ಎರವರ ಚಿಪ್ಪ (35) ಮೃತ ಕಾರ್ಮಿಕ.
ಅಂಗಡಿಗೆ ಬಂದು ಮನೆಗೆ ಹಿಂತಿರುಗುವಾಗ ಅಲ್ಲಿನ ಬೈರಮುಂಡ ಎಂಬಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ. ಗ್ರಾಮದ ಕಾಂಡೇರ ರಘು ಎಂಬವರ ತೋಟದಲ್ಲಿ ಕಾರ್ಮಿಕರಾಗಿದ್ದರು.