ಮಡಿಕೇರಿ, ಆ. 23: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕಾಫಿ ಫಸಲಿನ ಮೇಲೆ ತೀವ್ರ ಹಾನಿಯೊಂದಿಗೆ ಭೂಕುಸಿತದಂತಹ ಘಟನೆಗಳಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ನೀಡಲು ಕಾಫಿ ಮಂಡಳಿ ಸಹಾಯವಾಣಿ ಯೊಂದನ್ನು ಪ್ರಾರಂಭಿಸಿದೆ.

ಸುಮಾರು ನಾಲ್ಕು ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ತೀವ್ರ ಹಾನಿಯುಂಟಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತುರ್ತು ಸರ್ವೆ ನಡೆಸಬೇಕಾಗಿದೆ. ಕಾಫಿ ಮಂಡಳಿ ಈ ಬಗ್ಗೆ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಸಂಬಾರ ಮಂಡಳಿ ಹಾಗೂ ಅರಣ್ಯಾಧಿಕಾರಿಗಳ ಸಹಿತವಾಗಿ ಜಂಟಿ ಸಮೀಕ್ಷೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಮಾಹಿತಿಯನ್ನು ನಷ್ಟಕ್ಕೊಳ ಗಾದವರು ವ್ಯಾಟ್ಸಾಪ್ ಅಥವಾ ಈಮೇಲ್ ಮೂಲಕ ನೀಡಬಹುದಾಗಿದೆ.

ಮಾಹಿತಿಯನ್ನು ವಿಸ್ತರಣಾಧಿಕಾರಿ ಲಕ್ಷ್ಮಿಕಾಂತ್ ಎನ್.ಎಂ. (ವ್ಯಾಟ್ಸಾಪ್ ಸಂಖ್ಯೆ - 9739237948 ಈ ಮೇಲ್ ಜಜemಜಞ@gmಚಿiಟ.ಛಿom) ಗೆ ನೀಡಬಹುದಾಗಿದೆ.

ಗ್ರಾಮ, ಸರ್ವೆ ನಂಬರ್ ಎಷ್ಟು ಎಕರೆ ಎಂಬಿತ್ಯಾದಿ ಮಾಹಿತಿಯನ್ನು ಚಿತ್ರ ಸಹಿತವಾಗಿ ಕಳುಹಿಸಬಹುದಾಗಿದೆ. ತೋಟ ಮಾತ್ರವಲ್ಲದೆ, ಗೋದಾಮು, ಕಾಫಿ ಕಣ, ಪಲ್ಪಿಂಗ್ ಘಟಕ, ಕೆರೆ, ಮರ ಬಿದ್ದಿರುವದು, ಭೂಕುಸಿತದ ಮಾಹಿತಿಯನ್ನು ಚಿತ್ರ ಸಹಿತ ನೀಡಬಹುದು ಎಂದು ಕಾಫಿ ಮಂಡಳಿ ಪ್ರಕಟಣೆ ತಿಳಿಸಿದೆ.