ಮಡಿಕೇರಿ, ಆ. 23: ಭೂಮಿ ಉಸ್ತುವಾರಿ ಕೋಶ ಬೆಂಗಳೂರು ಇವರು ಕೊಡಗು ನೆರೆ ಸಂತ್ರಸ್ತರಿಗಾಗಿ ಕೊಡಗು ವಿಪತ್ತು ರಕ್ಷಣಾ ಪರಿಹಾರ ಅಂತರ್ಜಾಲ ತಾಣ ಆರಂಭಿಸಿದ್ದಾರೆ.

ನೆರೆಪೀಡಿತ ಪ್ರದೇಶಗಳಲ್ಲಿರುವವರ ನೆರವಿಗಾಗಿ ಇದನ್ನು ಆರಂಭಿಸಲಾಗಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿ ಸಿಲುಕಿರುವ ಹಾಗೂ ಪರಿಹಾರ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದವರು ಪರಿಹಾರ, ರಕ್ಷಣೆ ಹಾಗೂ ಸಾಮಗ್ರಿ, ಔಷಧಿ ಮಾಹಿತಿಗೆ ಹೆಸರು ನೋಂದಾಯಿಸಬಹುದು. ಸಂತ್ರಸ್ತರು ಇರುವ ಕಡೆ ಅಗತ್ಯವಾದ ಪರಿಕರ, ಸಹಾಯವನ್ನು ಒದಗಿಸಲಾಗುತ್ತದೆ. ಸ್ಥಳಕ್ಕೆ ತೆರಳುವ ಸ್ವಯಂ ಸೇವಕರು, ಅಧಿಕಾರಿಗಳ ಮೂಲಕ ಪರಿಹಾರಕ್ಕಾಗಿ ಹೆಸರು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ತಿತಿತಿ.ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ ಸಂಪರ್ಕಿಸಬಹುದಾಗಿದೆ. ಈ ತಾಣದಿಂದ ಸ್ವಯಂ ಸೇವಕ ತಂಡಗಳು ಮಾಹಿತಿ ಪಡೆದು ಸಹಾಯ ನೀಡಬಹುದಾಗಿದೆ. ಈ ತಂತ್ರಾಂಶವು ನಾಗರಿಕರಿಗೆ ಪರಿಹಾರವನ್ನು ಪಡೆಯಲು ಮತ್ತು ಪರಿಹಾರ ನೀಡಲು ಅನುಮತಿಸುತ್ತದೆ. ಎಲ್ಲಾ ವಿನಂತಿಗಳನ್ನು “ಸಹಾಯಕ್ಕಾಗಿ ನೋಂದಾಯಿಸಿರುವ ವಿನಂತಿಗಳು” ಅಡಿಯಲ್ಲಿ ಸಾರ್ವಜನಿಕ ಮಾಹಿತಿಯಲ್ಲಿ ಕಾಣಬಹುದು. ಆದ್ದರಿಂದ ಯಾರು ಬೇಕಾದರೂ ವಿನಂತಿಗೆ ಪ್ರತಿಕ್ರಿಯಿಸಬಹುದಾಗಿದೆ.