ಮಡಿಕೇರಿ, ಆ. 23: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಡಿಕೇರಿ ನಗರದ ಸನಿಹದಲ್ಲಿ ಬರುವ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಅಬ್ಬಿಜಲಪಾತ ಎಲ್ಲರಿಗೂ ತಿಳಿದಿದೆ. ಹಾಲ್ನೊರೆಯೊಂದಿಗೆ ಧುಮ್ಮಿಕ್ಕುತ್ತಿದ್ದ ಈ ಜಲಪಾತ ಇದೀಗ ಮೋಹಕವಾಗಿಲ್ಲ. ಬದಲಿಗೆ ಭಯಾನಕವಾಗಿದೆ. ನೀರಿನ ತೀವ್ರ ಪ್ರವಾಹದಿಂದಾಗಿ ಈ ಜಲಧಾರೆ ಭಯಾನಕವಾಗಿದ್ದು, ಜಲಪಾತದ ಎದುರು ಭಾಗದಲ್ಲಿ ಭಾರೀ ಭೂಕುಸಿತದೊಂದಿಗೆ ಅನಾಹುತ ಸಂಭವಿಸಿದೆ. ಇಲ್ಲಿನ ತೂಗು ಸೇತುವೆ ಕೂಡ ಈ ಹಿಂದೆಯೇ ಹಾನಿಗೊಳ ಗಾಗಿದ್ದು, ಇದೀಗ ಜಲಪಾತದ ಒತ್ತಿನಲ್ಲೇ ಭೂಕುಸಿತದಂತಹ ಅಪಾಯ ಸಂಭವಿಸಿರುವರಿಂದ ಈ ವ್ಯಾಪ್ತಿಗೆ ಪ್ರವೇಶವನ್ನು ಕೂಡ ನಿರ್ಬಂಧಿಸಲಾಗಿದೆ. ಇದರೊಂದಿಗೆ ಮತ್ತೊಂದು ಪ್ರವಾಸಿ ತಾಣವಾಗಿರುವ ಮಾಂದಲ್‍ಪಟ್ಟಿ ಕೂಡ ಅಪಾಯಕಾರಿಯಾಗಿದ್ದು, ಅಲ್ಲಿಗೂ ಪ್ರವೇಶ ನಿರ್ಬಂಧಿಸಲಾಗಿದೆ.
-ಚಿತ್ರ : ಫ್ರಾನ್ಸಿಸ್