ಮಡಿಕೇರಿ, ಆ. 23: ಕಳೆದ ತಾ. 11 ರಂದು ಕಾಡಾನೆ ಧಾಳಿಯಿಂದ ಕೈ ಮುರಿದುಕೊಂಡು ಪ್ರಾಣಾಪಾಯದಿಂದ ಪಾರಾಗಿ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಧಾ ಎಂಬ ಗಾಯಾಳು ಮಹಿಳೆ, ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದಾರೆ.
ಘಟನೆ ದಿನವೇ ಈ ಕೂಲಿ ಕಾರ್ಮಿಕ ಮಹಿಳೆಗೆ ಸೂಕ್ತ ಚಿಕಿತ್ಸೆ ಕಲ್ಪಿಸಲು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಂಬಂಧಿಸಿದವರಿಗೆ ಸೂಚಿಸಿದ್ದರು. ಬಳಿಕ ಶಾಸಕ ಅಪ್ಪಚ್ಚುರಂಜನ್ ಕೂಡ ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನ ಸೆಳೆದಿದ್ದರೂ, ಇದುವರೆಗೆ ಶಸ್ತ್ರಚಿಕಿತ್ಸೆ ಒದಗಿಸಿಲ್ಲವೆಂದು ಗಾಯಾಳು ಮಹಿಳೆಯ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.