ನಾಪೆÇೀಕ್ಲು, ಆ. 22: ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೂರುಳಿ ಸುಭಾಶ್ ನಗರ ಪೈಸಾರಿಯಲ್ಲಿ ಮಂಗಳವಾರ ರಾತ್ರಿ 11.30 ಗಂಟೆಗೆ ಭೂಮಿಯೊಳಗೆ ಶಬ್ಧ ಕೇಳಿ ಬಂದಿರುವದಾಗಿ ಸ್ಥಳೀಯ ನಿವಾಸಿ ಬಿ.ಆರ್.ಕೃಷ್ಣಪ್ಪ ತಿಳಿಸಿದ್ದಾರೆ.ಪಕ್ಕದ ತೋಟದಲ್ಲಿ ಮರ ಬಿದ್ದಿರಬಹುದೆಂದು ಊಹಿಸಿದ್ದ ಕೃಷ್ಣಪ್ಪ ಬೆಳಿಗ್ಗೆ ಎದ್ದು (ಮೊದಲ ಪುಟದಿಂದ) ನೋಡಿದ ಸಂದರ್ಭ ಮನೆಯ ಮುಂಭಾಗದಿಂದ ಹಿಂಭಾಗದವರೆಗೆ ಸಿಮೆಂಟ್ ಗೋಡೆ ಮತ್ತು ನೆಲ ಬಿರುಕು ಬಿಟ್ಟಿದ್ದು ಗೋಚರವಾಗಿ ಭಯಬೀತರಾಗಿದ್ದಾರೆ. ಪಕ್ಕದ ಮನೆಯ ಜಯಾ ಎಂಬವರೂ ಈ ಶಬ್ಧ ಕೇಳಿದಿರುವದಾಗಿ ತಿಳಿಸಿದ್ದಾರೆ. ಸುಭಾಶ್ ನಗರದಲ್ಲಿ ಸುಮಾರು 200 ಮನೆಗಳಲ್ಲಿ ಜನ ವಾಸಿಸುತ್ತಿದ್ದಾರೆ.ಜಿಲ್ಲೆಯಲ್ಲಿ ನಡೆದಿರುವ ಭಯಭೀತ ಘಟನೆಯ ಹಿನ್ನಲೆಯಲ್ಲಿ ಈ ಭಾಗದಲ್ಲಿಯೂ ಜನ ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
- ಪ್ರಭಾಕರ್