ಸೋಮವಾರಪೇಟೆ, ಆ. 23: ಕಳೆದ ತಾ. 17ರಿಂದ ನಾಪತ್ತೆಯಾಗಿರುವ ಹಟ್ಟಿಹೊಳೆ ನಿವಾಸಿ ಫ್ರಾನ್ಸಿಸ್(ಅಪ್ಪು) ಅವರ ಪತ್ತೆಗೆ ಬೆಂಗಳೂರಿನ ಗರುಡ ಫೋರ್ಸ್‍ನ ಸಿಬ್ಬಂದಿಗಳು ಹೊಳೆ ಬದಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ತಾ. 17ರಿಂದ ನಾಪತ್ತೆಯಾಗಿರುವ ಫ್ರಾನ್ಸಿಸ್ ಅವರು ತಮ್ಮ ಮನೆಯ ಹಿಂಭಾಗ ಹರಿಯುವ ಹಟ್ಟಿಹೊಳೆಯಲ್ಲಿ ಮುಳುಗಿರುವ ಸಂಶಯದಿಂದ ಗರುಡ ಪಡೆಯವರು ಸ್ಥಳೀಯ ಪೊಲೀಸರ ಸಹಕಾರದಿಂದ ಹೊಳೆಯಲ್ಲಿ ಸುಮಾರು 2 ಕಿ.ಮೀ. ನಷ್ಟು ಹುಡುಕಾಡ ನಡೆಸಿದರು.
ಹೊಳೆಯ ಎರಡೂಬದಿಯಲ್ಲಿ 7 ಮಂದಿಯ ತಂಡ ಸಂಜೆಯವರೆಗೂ ಹುಡುಕಾಟ ನಡೆಸಿದ್ದು, ಯಾವದೇ ಪ್ರಯೋಜನ ಕಾಣಲಿಲ್ಲ.