ಸುಂಟಿಕೊಪ್ಪ, ಆ. 27: ಜಿಲ್ಲಾಡಳಿತ, ತಹಶೀಲ್ದಾರ್ ಕಂದಾಯ ಇಲಾಖೆ ವತಿಯಿಂದ ನಿರಾಶ್ರಿತ ಪುರ್ನವಸತಿ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಸಕಾರದಿಂದ ನೀಡಲಾಗುವ 3,800 ಮೊತ್ತದ ಚೆಕ್‍ನ್ನು ವಿತರಿಸಲಾಯಿತು.
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪುರ್ನವಸತಿ ಕೇಂದ್ರಗಳಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ತಾಲೂಕು ತಹಶೀಲ್ದಾರ್ ಮಹೇಶ್, ಸುಂಟಿಕೊಪ್ಪ ಹೋಬಳಿ ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮಲೆಕ್ಕಿಗ ಯಶವಂತ್‍ರವರು ಸಂತ್ರಸ್ತರಿಗೆ ಸರಕಾರದಿಂದ ಘೋಷಣೆಯಾದ ಮೊತ್ತದ ಚೆಕ್‍ನ್ನು ವಿತರಿಸಿದರು.