ಸೋಮವಾರಪೇಟೆ, ಆ. 27: ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ಥ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ಹಾಗೂ ಮೇವು ವಿತರಿಸುವ ಕಾರ್ಯಕ್ರಮ ಪಶು ವೈದ್ಯಕೀಯ ಇಲಾಖೆಯ ವತಿಯಿಂದ ನಡೆಯಿತು.

ತಾಲೂಕಿನ ಬಾಚಳ್ಳಿ, ಕುಮಾರಳ್ಳಿ, ಹಂಚಿನಳ್ಳಿ ಮುಂತಾದ ಗ್ರಾಮಗಳಿಗೆ ವಾಹನದಲ್ಲಿ ತೆರಳಿ ಜಾನುವಾರು ಸಾಕಾಣೆದಾರರಿಗೆ ಹಸುವೊಂದಕ್ಕೆ 10 ಕೆ.ಜಿ. ಪಶು ಆಹಾರ, ಹಂದಿಗೆ 2 ಕೆ.ಜಿ ಆಹಾರವನ್ನು ವಿತರಿಸಲಾಯಿತು.ಈ ಸಂದರ್ಭ ಇಲಾಖೆಯ ವೈದ್ಯರಾದ ಶ್ರೀದೇವ್, ಹಿರಿಯ ಪಶುವೈದ್ಯ ನಿರೀಕ್ಷಕರಾದ ಎನ್.ಟಿ. ವಸಂತ್ ಮತ್ತಿತರರು ಇದ್ದರು.