ಸುಂಟಿಕೊಪ್ಪ, ಆ. 27 : ಸುಂಟಿಕೊಪ್ಪ ಸತ್ತಮುತ್ತ ಜಲಪ್ರಳಯದಿಂದ ಮನೆ ಕಳೆದು ಕೊಂಡು ನಿರಾಶಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಮತ್ತು ಕಾಫಿ ತೋಟಗಳಲ್ಲಿ ಕೆಲಸವಿಲ್ಲದ ಕೂಲಿ ಕಾರ್ಮಿಕರಿಗೆ ಕುಶಾಲ ನಗರದ ಬೈಲುಕೊಪ್ಪ ಟಿಬೇಟಿಯನ್ ಕ್ಯಾಂಪಿನ ಸದಸ್ಯರು ತಮ್ಮ ವಾಹನದಲ್ಲಿ ಬಂದು ಬಟ್ಟೆ, ಬಿಸ್ಕತ್, ಕಂಬಳಿ ಇನ್ನಿತರ ವಸ್ತುಗಳನ್ನು ವಿತರಿಸಿ ಕೊಡಗಿನ ಸಂತ್ರಸ್ತರಿಗೆ ನಮ್ಮ ಅಳಿಲು ಕಾಣಿಕೆ ಎಂದು ಮಾನವೀಯತೆ ಮೆರೆದರು.