ಚೆಟ್ಟಳಿ, ಆ. 27 : ಮಾದಾಪುÀರ ಮಾರ್ಗವಾಗಿ ಹಟ್ಟಿಹೊಳೆಯಿಂದ ಮಡಿಕೇರಿಗೆ ಹೋಗುವ ರಸ್ತೆಯಲ್ಲಿ ಮಳೆಯ ಅನಾಹುತದಿಂದ ಭೂಕುಸಿದು ಸಂಪರ್ಕ ಕಡಿತಗೊಂಡಿದೆ. ಕಳೆದೆರಡು ದಿನಗಳಿಂದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಹಟ್ಟಿಹೊಳೆಯಲ್ಲಿ ಮಣ್ಣಿನಿಂದ ತುಂಬಿಹೋದ ರಸ್ತೆಯನ್ನು ಹಿಟಾಚಿ ಯಂತ್ರದಿಂದ ತೆರವುಗೊಳಿಸಿ ಸಂಪರ್ಕ ರಸ್ತೆ ಕಲ್ಪಿಸುವ ಬಗ್ಗೆ ಕೆಲಸಕಾರ್ಯಗಳು ಶೀಘ್ರ ಗತಿಯಲ್ಲಿ ನಡೆಯುತ್ತಿದೆ. -ಕರುಣ್ ಕಾಳಯ್ಯ