ಗೋಧ್ರಾ ಹತ್ಯಾಕಾಂಡ : ಇಬ್ಬರಿಗೆ ಜೀವಾವಧಿ ಶಿಕ್ಷೆ
ಅಹಮದಾಬಾದ್, ಆ.27 : 2002 ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಕುರಿತಂತೆ ಇಂದು ವಿಶೇಷ ಎಸ್ ಐಟಿ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಧೀಶ ಎಚ್.ಸಿ.ವೊರಾ ನೀಡಿದ ತೀರ್ಪಿನಲ್ಲಿ ಫಾರೂಕ್ ಬಾನಾ ಹಾಗೂ ಇಮ್ರಾನ್ ಶೇರು ಅವರುಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇನ್ನು ಪ್ರಕರಣದಲ್ಲಿ ಇತರೆ ಮೂವರು ಆರೋಪಿಗಳಾಗಿದ್ದ ಹುಸೇನ್ ಸುಲೇಮಾನ್ ಮೋಹನ್, ಕಸಮ್ ಭಮೇದಿ ಹಾಗೂ ಫರೂಕ್ ಧಾಂಟಿಯಾ ಅವರುಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 2015-2016ರಲ್ಲಿ ಈ ಐವರನ್ನು ಸಹ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಸಾಬರ್ಮತಿ ಸೆಂಟ್ರಲ್ ಜೈಲಿನ ವಿಶೇಷ ನ್ಯಾಯಾಲಯದಲ್ಲಿ ಇವರ ವಿಚಾರಣೆ ನಡೆದಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿರುವವರಲ್ಲಿ ಇನ್ನೂ ಎಂಟು ಮಂದಿ ತಲೆಮರೆಸಿಕೊಂಡಿದ್ದು ಮಾರ್ಚ್ 1, 2011 ರಂದು ವಿಶೇಷ ಎಸ್ ಐಟಿ ನ್ಯಾಯಾಲಯವು ಪ್ರಕರಣ ಕುರಿತು ಆರೋಪಪಟ್ಟಿ ದಾಖಲಿಸಿದಾಗ ಒಟ್ಟು 31 ಜನರ ಮೇಲೆ ದೋಷಾರೋಪಣೆ ಮಾಡಿತ್ತು. ಇದರಲ್ಲಿ 11 ಮಂದಿಗೆ ಮರಣದಂಡನೆ ಹಾಗೂ 20 ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದಾಗ್ಯೂ, 2017 ರ ಅಕ್ಟೋಬರ್ ನಲ್ಲಿ ಗುಜರಾತ್ ಹೈಕೋರ್ಟ್ ಸಹ 11 ಆರೋಪಿಗಳನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಿತ್ತು.
ಬೀದಿ ವ್ಯಾಪಾರಿಗಳಿಗೆ ಸರಕಾರದಿಂದಲೇ ಸಾಲ
ಬೆಂಗಳೂರು, ಆ.27 : ಮೀಟರ್ ಬಡ್ಡಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ದಿನದ ದುಡಿಮೆಯಲ್ಲಿ ಜೀವನ ನಡೆಸುವ ಬೀದಿ ವ್ಯಾಪಾರಿಗಳಿಗೆ ಸ್ವತಃ ಸಾಲ ನೀಡಲು ಮುಂದಾಗಿದ್ದಾರೆ. ಬಡ್ಡಿ ವ್ಯಾಪಾರಿಗಳಿಂದ ಬೆಳಿಗ್ಗೆ ಹಣ ಪಡೆದು ಸಂಜೆ ವೇಳೆ ಮರು ಪಾವತಿ ಮಾಡವ ಸಣ್ಣ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದ ವತಿಯಿಂದಲೇ ನಿತ್ಯ ದುಡಿಮೆ ಬಂಡವಾಳ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಪ್ರಾಯೋಗಿಕವಾಗಿ ಈ ಯೋಜನೆ ಗಣೇಶ ಚತುರ್ಥಿ ಹಬ್ಬದಂದು ಬೆಂಗಳೂರು ಹಾಗೂ ಮೈಸೂರಿನ ಒಟ್ಟು 10 ಪ್ರದೇಶಗಳಲ್ಲಿ ಜಾರಿಗೆ ಬರಲಿದೆ. ಯೋಜನೆಯಿಂದ ಎದುರಾಗುವ ಸಮಸ್ಯೆಗಳನ್ನು ನೋಡಿಕೊಂಡು ಅವುಗನ್ನು ಸರಿಪಡಿಸಿಕೊಕಂಡ ಬಳಿಕ ಇತರೆ ಸ್ಥಳಗಳಿಗೆ ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಬಡ್ಡಿ ನೀಡುವವರು ಶೇ.2 ರಿಂದ ಶೇ.10ವರೆಗೂ ಬಡ್ಡಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಡವರಿಗೆ ಒಂದು ದಿನದ ಸಾಲ ನೀಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ನೀಡಬೇಕಾಗಿರುವುದಿಲ್ಲ. ಈ ಕುರಿತಂತೆ ಶೀಘ್ರದಲ್ಲಿಯೇ ಘೋಷಣೆಗಳನ್ನು ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಹೇಳಿದ್ದಾರೆ.
ಮೇಜರ್ ಲೀಟುಲ್ ಗೊಗೋಯ್ ದೋಷಿ
ನವದೆಹಲಿ, ಆ.27 : ಶ್ರೀನಗರ ಹೋಟೆಲ್ ಕೇಸ್ ಸಂಬಂಧ ಮೇಜರ್ ಲೀಟುಲ್ ಗೊಗೋಯ್ ದೋಷಿ ಎಂದು ರುಜುವಾತದ ಹಿನ್ನೆಲೆಯಲ್ಲಿ ಅವರನ್ನು ಸೇನಾ ಕೋರ್ಟ್ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೊತೆಗೆ ಅವರ ವಿರುದ್ಧ ಶಿಸ್ತು ಕ್ರಮಕ್ಕು ಮುಂದಾಗಿದೆ, ಮಾರ್ಚ್ 23 ರಂದು ಶ್ರೀನಗರ ಹೋಟೆಲ್ ಒಂದರಲ್ಲಿ ಲೀಟುಲ್ ಗೊಗೋಯ್ ಮಹಿಳೆಯ ಜೊತೆ ಕಾಣಿಸಿಕೊಂಜ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಗಗೋಯ್ ಅವರು ಸೇನಾ ನಿಯಮಗಳನ್ನು ಉಲ್ಲಂಘಿಸಿರುವದು ಕೋರ್ಟ್ ಗೆ ತಿಳಿಯಿತು. ಸಂಘರ್ಷ ವಲಯದಲ್ಲಿ ಸ್ಥಳೀಯ ಮಹಿಳೆಯೊಂದಿಗೆ ಮೇಜರ್ ಸಂಪರ್ಕ ಬೆಳೆಸುತ್ತಿದ್ದುದ್ದು ಸೇನಾ ನೀತಿ ನಿಯಮಗಳಿಗೆ ವಿರುದ್ಧವಾದದ್ದಾಗಿದೆ ಎಂದು ಹೇಳಿದೆ.ಹಾಗೂ ಕರ್ತವ್ಯ ನಿರತ ಪ್ರದೇಶದಿಂದ ದೂರ ತೆರಳಿದ್ದು ತಪ್ಪು ಎಂದು ಸೇನಾ ನ್ಯಾಯಾಲಯ ಹೇಳಿದೆ. 18 ವರ್ಷದ ಮಹಿಳೆ ಜೊತೆ ಮೇಜರ್ ಹೋಟೆಲ್ ಪ್ರವೇಶಿಸಲು ಯತ್ನಿಸಿದ್ದರು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಮಾನವ ಗುರಾಣಿಯನ್ನಾಗಿ ಬಳಸಿಕೊಂಡು, ಲೀಟುಲ್ ಗೊಗೋಯ್ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿದ್ದರು.
ವಾಜಪೇಯಿ ಅವರಿಗೆ ಸ್ವರ್ಣ ಪದಕ ಅರ್ಪಣೆ
ಜಕಾರ್ತ, ಆ.27 : ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಆಟಗಾರ ನೀರಜ್ ಛೋಪ್ರಾ ತಮ್ಮ ಗೆಲುವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಣೆ ಮಾಡಿದ್ದಾರೆ. ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ ಜಾವೆಲಿನ್ ಥ್ರೊದಲ್ಲಿ ಭಾರತದ ನೀರಜ್ ಚೋಪ್ರ ಐತಿಹಾಸಿಕ ಚಿನ್ನದ ಪದಕ ಗಳಿಸಿದ್ದರು. ಆ ಮೂಲಕ ನೀರಜ್ ಚೋಪ್ರಾ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಜಾವೆಲಿನ್ ಥ್ರೋ ನಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಆಟಗಾರ ಕೀರ್ತಿಗೆ ಭಾಜನರಾದರು. ಪಂದ್ಯದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನೀರಜ್ ಚೋಪ್ರಾ, ನನ್ನ ಪ್ರದರ್ಶನದಿಂದ ನನಗೆ ನಿಜಕ್ಕೂ ಖುಷಿಯಿದೆ. ಸಾಕಷ್ಟು ತರಬೇತಿ ಮತ್ತು ಸಾಕಷ್ಟು ಕಷ್ಟ ಪಟ್ಟಿದ್ದೆ. ನನ್ನ ಶ್ರಮಕ್ಕೆ ಫಲ ಸಿಕ್ಕಿದ್ದು, ನನ್ನ ಈ ಗೆಲುವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅರ್ಪಿಸುತ್ತೇನೆ. ಅವರು ಮಹಾನ್ ವ್ಯಕ್ತಿ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಇನ್ನು ಇಂದು ನಡೆದ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ, ಮೊದಲ ಎಸೆತದಲ್ಲಿ 83.46 ಅಂಕ ಗಳಿಸಿದ್ದ ಚೋಪ್ರಾ ಮೂರನೇ ಎಸೆತದಲ್ಲಿ 88.06 ಅಂಕದೊಂದಿಗೆ ಚಿನ್ನಕ್ಕೆ ಗುರಿ ಇಟ್ಟರು. ಚೀನಾದ ಕಿಝೆನ್ ಲಿಯು 82.22 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ ಪಾಕಿಸ್ತಾನದ ಅರ್ಷದ್ ನದೀಮ್ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್‍ಗೆ
ಜಕಾರ್ತಾ, ಆ.27 : ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾಡ್ ಹದಿನೆಂಟನೇ ಆವೃತ್ತಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್ ಪ್ರವೇಶಿಸಿದೆ. ಥಾಯ್ ಲ್ಯಾಂಡ್ ವಿರುದ್ಧದ ಪಂದ್ಯವನ್ನು 5-0 ಗೋಲುಗಳಿಂದ ಜಯಿಸಿದ ಭಾರತ ವನಿತೆಯರು ಅಂತಿಮ ನಾಲ್ಕರ ಘಟ್ಟ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡದ ನಾಯಕಿ ರಾಣಿ ರಾಂಪಾಲ್ ಹ್ಯಾಟ್ರಿಕ್ ಗೋಲು ದಾಖಲಿಸಿ ಸಾಧನೆ ಮೆರೆದಿದ್ದಾರೆ. ಅವರು ಪಂದ್ಯದ 37, 46 ನತ್ತು 56 ನೇ ನಿಮಿಷಗಳಲ್ಲಿ ಗೊಲು ದಾಖಲಿಸಿದರು. ವಿಶ್ವದ 28 ನೇ ಶ್ರೇಯಾಂಕಿತ ಥಾಯ್ ಲ್ಯಾಂಡ್ ಗೆ ಯಾವುದೇ ಗೋಲು ಗಳಿಸಲು ಭಾರತೀಯ ಪಡೆ ಅವಕಾಶವನ್ನೇ ನಿಡಲಿಲ್ಲ ಎನ್ನುವದು ಗಮನಾರ್ಹ.