ಮಡಿಕೇರಿ, ಆ. 27: ಮಳೆಯಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ನಗರದ ಕೊಡವ ಸಮಾಜ ಕಟ್ಟಡದಲ್ಲಿ ಕೊಡಗು ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಕೊಡಗು ಏಕೀಕರಣ ರಂಗ, ಕೊಡವ ಟ್ರಸ್ಟ್, ವೇಕ್ ಸಂಸ್ಥೆ ಸಂಯುಕ್ತಾ ಶ್ರಯದಲ್ಲಿ ಪ್ರಾರಂಭಿಸ ಲಾಗಿರುವ ಕೊಡಗು ಸೇವಾ ಕೇಂದ್ರವನ್ನು ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರುಗಳು ಕೊಡಗು ಸೇವಾ ಕೇಂದ್ರ ದಿಂದ ನೊಂದವರ ಕಣ್ಣೀರೊರೆಸುವ ಕೆಲಸವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. (ಮೊದಲ ಪುಟದಿಂದ) ಈ ಸಂದರ್ಭ ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ, ಕೊಡಗು ಏಕೀಕರಣ ರಂಗದ ಅಧ್ಯಕ್ಷ ಮಂಡೆಪಂಡ ಸುಗುಣ ಮುತ್ತಣ್ಣ, ಪ್ರಮುಖರಾದ ತಮ್ಮು ಪೂವಯ್ಯ, ಬಿ.ಎಸ್. ತಮ್ಮಯ್ಯ, ಎಂ.ಕೆ. ಅಪ್ಪಚ್ಚು ಮತ್ತಿತರರು ಇದ್ದರು.
ಕೊಡಗು ಸೇವಾ ಕೇಂದ್ರದಲ್ಲಿ ಸಂತ್ರಸ್ತರು ಮಳೆಯಿಂದ ತಮಗಾದ ಸಮಸ್ಯೆಗಳ ವಿವರವನ್ನು ನೀಡಬಹುದು. ಇದಕ್ಕಾಗಿ ಕೇಂದ್ರದಲ್ಲೇ ಅರ್ಜಿಗಳು ಉಚಿತವಾಗಿ ಲಭ್ಯವಿದ್ದು, ಅರ್ಜಿಯನ್ನು ಭರ್ತಿ ಮಾಡಿ, ಸಹಿ ಮಾಡಿ ನೀಡಿದಲ್ಲಿ ಅಂತಹ ಅರ್ಜಿಗಳನ್ನು ಸರ್ಕಾರಕ್ಕೆ ತಲಪಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಸೇವಾ ಕೇಂದ್ರ ಶ್ರಮಿಸಲಿದೆ. ಓದು - ಬರಹ ಬಾರದವರಿಗೂ ಕೂಡ ಸೇವಾ ಕೇಂದ್ರದಲ್ಲಿ ಅರ್ಜಿ ಭರ್ತಿ ಮಾಡಲು ಸಿಬ್ಬಂದಿ ಇರುತ್ತಾರೆ.