ನವದೆಹಲಿ, ಆ.27 : ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತದೊಂದಿಗೆ ತೈಲ ಕಂಪನಿಗಳು ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78 ರೂ. ಡೀಸೆಲ್ 69. 46 ಪೈಸೆ ಆಗಿದೆ. ರಾಜ್ಯ ಸ್ವಾಮ್ಯದ ತೈಲ ಕಂಪನಿಗಳ ಪರಿಷ್ಕೃತ ದರ ಅಧಿಸೂಚನೆ ಪ್ರಕಾರ, ಪ್ರತಿ ಲೀಟರ್ ಡೀಸೆಲ್ ಗೆ 14 ಪೈಸೆ ಹಾಗೂ ಪೆಟ್ರೋಲ್ 13 ಪೈಸೆಯಷ್ಟು ಹೆಚ್ಚಳಗೊಂಡಿದೆ. ದಾಖಲೆ ಪ್ರಮಾಣದಲ್ಲಿ ಡೀಸೆಲ್ ಬೆಲೆ ಹೆಚ್ಚಳಗೊಂಡಿದ್ದು, ದೆಹಲಿಯಲ್ಲಿ 69.46 ಪೈಸೆ ಆಗಿದೆ. ದೇಶದ ಎಲ್ಲಾ ಮಹಾನಗರಗಳಿಗಿಂತ ದೆಹಲಿಯಲ್ಲಿ ತೈಲ ಬೆಲೆ ಕಡಿಮೆ ಪ್ರಮಾಣದಲ್ಲಿಇರುತ್ತದೆ. ಇತರ ರಾಜ್ಯಗಳಲ್ಲಿ ವ್ಯಾಟ್ ಅಥವಾ ಮಾರಾಟ ತೆರಿಗೆಯನ್ನು ಹಾಕಲಾಗುತ್ತದೆ. ಈ ಹಿಂದೆ ಮೇ 29 ರಂದು ದೆಹಲಿಯಲ್ಲಿ ಡೀಸೆಲ್ ಬೆಲೆಯಲ್ಲಿ 69.31 ರಷ್ಟು ಹೆಚ್ಚುಗೊಂಡಿತ್ತು. ಇಂದು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 77.91 ಪೈಸೆ ಆಗಿದ್ದರೆ, ಮುಂಬೈಯಲ್ಲಿ 85.33 ಪೈಸೆ ಆಗಿದೆ. ಪರಿಷ್ಕೃತ ದರದಂತೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 80.44 ಪೈಸೆ ಆಗಿದ್ದರೆ. ಡೀಸೆಲ್ 71. 68 ಪೈಸೆ ಆಗಿದೆ.