ಮಡಿಕೇರಿ, ಆ. 27: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. 16ರಂದು ಬೆಳಿಗ್ಗೆ ಸುರಿದ ಧಾರಾಕಾರ ಮಳೆಯ ನಡುವೆ ಇಂದಿನ ತನಕವೂ ಬಿಡುವಿಲ್ಲದೆ ಮುಂದುವರಿದ ಪರಿಣಾಮ ಅಲ್ಲಲ್ಲಿ ಭಯಾನಕ ದೃಶ್ಯಗಳು ಕಣ್ಣಿಗೆ ಎದುರಾಗುವದ ರೊಂದಿಗೆ ಮಡಿಕೇರಿ ಜನತೆ ಬೆಚ್ಚಿಹೋಗಿದ್ದಾರೆ. ಒಂದೆಡೆ ಗ್ರಾಮೀಣ ಜನತೆ ಮಳೆಯ ಹೊಡೆತದಿಂದ ತತ್ತರಿಸಿ ಬದುಕು ಕಳೆದುಕೊಂಡರೆ, ಇಲ್ಲಿನ ಜನತೆ ಭಯದೊಂದಿಗೆ ಮುಲಗುತ್ತಿದ್ದಾರೆ.ಜಿಲ್ಲಾ ಕೇಂದ್ರದಲ್ಲಿ ಶತಮಾನದ ಬಸ್ ನಿಲ್ದಾಣ ಮೇಲ್ಭಾಗದ ರಸ್ತೆ ಸಹಿತ ಭೂಕುಸಿತದ ದೃಶ್ಯದೊಂದಿಗೆ, ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿ ಕೊಂಡಿರುವ ಹತ್ತಾರು ಮಳಿಗೆಗಳು ಮಣ್ಣುಪಾಲಾಗಿವೆ. ಮರು ಘಳಿಗೆಯಿಂದ ಮಲ್ಲಿಕಾರ್ಜುನ ನಗರ, ಚಾಮುಂಡೇಶ್ವರಿ ನಗರ, ಇಂದಿರಾನಗರ, ಜ್ಯೋತಿ ನಗರ, ಮಂಗಳಾದೇವಿನಗರ ಮುಂತಾದೆಡೆ ಗಳಲ್ಲಿ ಸಾಲು ಸಾಲು ಮನೆಗಳು ಹಾನಿಗೊಂಡಿವೆ.ನಗರಸಭೆಯ ಮಾಜೀ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಹಾಗೂ ಉದ್ಯಮಿ ಪಿ.ಸಿ. ತಮ್ಮಯ್ಯ ತತ್ತರಿಸಿ ಬದುಕು ಕಳೆದುಕೊಂಡರೆ, ಇಲ್ಲಿನ ಜನತೆ ಭಯದೊಂದಿಗೆ ಮುಲಗುತ್ತಿದ್ದಾರೆ.ಜಿಲ್ಲಾ ಕೇಂದ್ರದಲ್ಲಿ ಶತಮಾನದ ಬಸ್ ನಿಲ್ದಾಣ ಮೇಲ್ಭಾಗದ ರಸ್ತೆ ಸಹಿತ ಭೂಕುಸಿತದ ದೃಶ್ಯದೊಂದಿಗೆ, ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿ ಕೊಂಡಿರುವ ಹತ್ತಾರು ಮಳಿಗೆಗಳು ಮಣ್ಣುಪಾಲಾಗಿವೆ. ಮರು ಘಳಿಗೆಯಿಂದ ಮಲ್ಲಿಕಾರ್ಜುನ ನಗರ, ಚಾಮುಂಡೇಶ್ವರಿ ನಗರ, ಇಂದಿರಾನಗರ, ಜ್ಯೋತಿ ನಗರ, ಮಂಗಳಾದೇವಿನಗರ ಮುಂತಾದೆಡೆ ಗಳಲ್ಲಿ ಸಾಲು ಸಾಲು ಮನೆಗಳು ಹಾನಿಗೊಂಡಿವೆ.

ನಗರಸಭೆಯ ಮಾಜೀ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಹಾಗೂ ಉದ್ಯಮಿ ಪಿ.ಸಿ. ತಮ್ಮಯ್ಯ

ಪತ್ರಿಕಾಲಯಕ್ಕೂ ತಟ್ಟಿದ ಆಘಾತ: ಮುಂಗಾರುವಿನ ತೀವ್ರತೆಗೆ ಕೈಗಾರಿಕಾ ಬಡಾವಣೆಯಲ್ಲಿ ಮರಗಳ ಸಹಿತ ರಾಜ ಕಾಲುವೆ (ತೋಡಿಗೆ) ಬರೆ ಜರಿದು ನೀರೇಲ್ಲಾ ‘ಶಕ್ತಿ’ ಪತ್ರಿಕಾಲಯ, ಪಕ್ಕದ ವರ್ಕ್‍ಶಾಪ್ ಹಾಗೂ ಇಡೀ ಬಡಾವಣೆಗೆ ನುಗ್ಗಿ ಇಂದಿಗೂ ಸುಧಾರಿಸಿಕೊಳ್ಳಲು ಅಸಾಧ್ಯ ಸನ್ನಿವೇಶ ಕಂಡುಬಂದಿದೆ. ಜಿಲ್ಲೆಯಲ್ಲಿ ಮುಂಗಾರು ಇಳಿಮುಖಗೊಂಡಂತೆ ಭಾಸವಾದರೂ ಮಡಿಕೇರಿ ಸುತ್ತಮುತ್ತ ವರುಣನ ಕೋಪ ಇಳಿದಂತಿಲ್ಲ.

ರಸ್ತೆಗಳೇ ಮಾಯ: ಮಡಿಕೇರಿ- ಕಾಟಕೇರಿ ನಡುವೆಯೇ ಅಲ್ಲಲ್ಲಿ ಮಂಗಳೂರು ಹೆದ್ದಾರಿ ಕುಸಿಯುತ್ತಿದ್ದು, ಮೇಲಿಂದ ಮೇಲೆ ರಸ್ತೆಯೇ ಅಪಾಯದೊಂದಿಗೆ ಲಘು ವಾಹನಗಳ ಹೊರತಾಗಿ ಭವಿಷ್ಯದಲ್ಲಿ ಭಾರೀ ವಾಹನ ಸಂಚಾರಕ್ಕೆ ತಿಂಗಳುಗಟ್ಟಲೆ ತೊಡಕು ಉಂಟಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ತಾಳತ್‍ಮನೆ ಸ್ವಾಗತ ಕಮಾನು ತನಕ ಭಾರೀ ಅನಾಹುತ ಸಂಭವಿಸಿ ರಸ್ತೆ ನಾಶಗೊಂಡಿದೆ. ಇನ್ನು ಮದೆಯಿಂದ ಜೋಡುಪಾಲ ತನಕವೂ ಹೆದ್ದಾರಿ ಅಲ್ಲಲ್ಲಿ ಕುಸಿದು ಅಪಾಯ ಎದುರಾಗಿದ್ದರೆ, ಮಡಿಕೇರಿ- ಮೇಕೇರಿ ನಡುವೆ ದಿನೇ ದಿನೇ ರಸ್ತೆ ಕುಸಿಯತೊಡಗಿದ್ದು, ಪಕ್ಕದ ಬೆಟ್ಟ ಸಾಲಿನ ಮಣ್ಣು ಹೆದ್ದಾರಿಗೆ ಜರಿಯ ತೊಡಗಿದ್ದು, ಆ ಮಾರ್ಗದಲ್ಲೂ ಭಾರೀ ವಾಹನಗಳ ಓಡಾಟ ದುಸ್ಥರ ಗೊಂಡಿದೆ.

ಅಸಾಧ್ಯ ಚಿತ್ರಣ: ಇನ್ನೊಂದೆಡೆ ಮಡಿಕೇರಿಯಿಂದ ಮಕ್ಕಂದೂರು ತಲಪುವಷ್ಟರಲ್ಲಿ ಹಾಲೇರಿಯ ತಿರುವಿನಲ್ಲಿ ಹೆದ್ದಾರಿಯೇ ಕೊಚ್ಚಿ ಹೋಗಿದ್ದು, ಇಲ್ಲಿ ಬದಲಿ ಮಾರ್ಗ ಹೊರತಾಗಿ ಈ ಹಿಂದಿನ ರಸ್ತೆ ಸಂಪರ್ಕ ಕಾಣುವದು ಅಸಾಧ್ಯ ವಾಗಿದೆ. ನಗರದಿಂದ ಮೈಸೂರಿನತ್ತ ತೆರಳುವ ಹೆದ್ದಾರಿಯ ಬೋಯಿಕೇರಿ ತಿರುವಿನಿಂದ ಇಲ್ಲಿನ ಸುದರ್ಶನ ವೃತ್ತದ ತನಕ ಅನೇಕ ಕಡೆಗಳಲ್ಲಿ ಮೇಲಿಂದ ಮೇಲೆ ಅಪಾಯ ಸಂಭವಿಸುತ್ತಲೇ ಇದೆ.

ಬದುಕು ದುರ್ಭರ: ಈ ಎಲ್ಲಾ ತೊಡಕುಗಳ ನಡುವೆ ಮಡಿಕೇರಿ ಜನತೆಯೊಂದಿಗೆ ವರ್ತಕ ಸಮೂಹ, ಹೊಟೇಲ್‍ಗಳು, ಆಟೋ, ಟ್ಯಾಕ್ಸಿ ಚಾಲಕರು, ಖಾಸಗಿ ಬಸ್ ಮಾಲೀಕರೊಂದಿಗೆ ಕಾರ್ಮಿಕ ಬಳಗ ಸಹಿತ ಸಾಮಾನ್ಯ ಜನತೆ ದೈನಂದಿನ ಜೀವನಕ್ಕೆ ಪರಿತಪಿಸತೊಡಗಿದ್ದಾರೆ. ಹೂವಿನ ವ್ಯಾಪಾರದಿಂದ ದಿನಸಿ ವರ್ತಕ ಸಹಿತ ...., ಚಮ್ಮಾರ ವೃತ್ತಿ ನಿರತರು ಕೂಡ ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ. ಒಂದು ರೀತಿ ಮಡಿಕೇರಿ ಜನತೆಯ ಬದುಕು ದುರ್ಬರದೊಂದಿಗೆ ವರುಣನ ಮುನಿಸಿನಿಂದ ಹೊರಬರಲಾರದೆ ತತ್ತರಿಸಿದ್ದಾರೆ. -ಶ್ರೀಸುತ