ಸುಂಟಿಕೊಪ್ಪ, ಆ. 27: ಭೀಕರ ಜಲಪ್ರಳಯಕ್ಕೆ ತತ್ತರಿಸಿ ಇಲ್ಲಿನ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಬೆಂಗಳೂರಿನ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ಹೆಚ್.ಇ.ಕೆ.ಎಸ್‍ಯು ವಿವಿಧ ಸಾಮಗ್ರಿಗಳ ಕಿಟ್ಟನ್ನು ಆಯಾ ಕುಟುಂಬಗಳಿಗೆ ವಿತರಿಸಿ ಸಾಂತ್ವನ ಹೇಳಿದರು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಖತೀಜ ಉಮ್ಮ ಮದರಸಗಳಿಗೆ ತೆರಳಿ ಸಂತ್ರಸ್ತರನ್ನು ಪರಿಚಯ ಮಾಡಿಕೊಂಡು ಅವರ ಸಮಸ್ಯೆಯನ್ನು ಆಲಿಸಿದರು.ನಂತರ ಮಾತನಾಡಿದ ವೇದಿಕೆ ರಾಜ್ಯ ಸಂಚಾಲಕ ರಾಜಶೇಖರ್ ನಾಯ್ಡು, ನಾವು ಶ್ರೀಮಂತ

ವರ್ಗದವರಿಂದ ದಾನದ ರೂಪದಲ್ಲಿ ಸ್ವೀಕಾರ ಮಾಡಿದ ವಸ್ತುಗಳಲ್ಲ. ಕೂಲಿ ಕೆಲಸ ಮಾಡಿ ಬೆವರು ಸುರಿಸಿ ಸಂಪಾದಿಸಿದ ಹಣದಿಂದ ಸಂಗ್ರಹಿಸಿ 1000 ದಷ್ಟು ವಿವಿಧ ವಸ್ತುಗಳ ಕಿಟ್ಟನ್ನು ಸಂತ್ರಸ್ತರಿಗೆ ವಿತರಿಸಿದ್ದೇವೆ. ಯಾವದೇ ಸಹಾಯ ಬೇಕಾದಲ್ಲಿ ಸಂಪರ್ಕಿಸುವಂತೆ ಎಂದು ತಿಳಿಸಿದರು.

ಇವರೊಂದಿಗೆ ಚಿಂತನ ಪೌಂಡೇಶನ್ ನಿರ್ದೇಶಕ ಚೆನ್ನಪ್ಪ, ಮಕ್ಕಳ ರಕ್ಷಣಾ ಆಯೋಗದ ಖಜಾಂಚಿ ಕೆ. ಚಿತ್ರಾವತಿ, ಸದಸ್ಯ ಕೆ. ಬಿ. ರೂಪನಾಯಕ್, ಹೆಚ್.ಇ.ಕೆ. ಎಸ್‍ನ ಜಿ.ಎಲ್. ಸಿಲ್ವಯಿ, ಗಣೇಶ ಅಸೋಸಿಯೇಟ್ಸ್ ಮಾಲೀಕ ಶಾಂತರಾಮ ಕಾಮತ್ ಇತರರು ಇದ್ದರು.