ಗುಡ್ಡೆಹೊಸೂರು, ಆ. 28: ರಾಜ್ಯ ಕೃಷಿ ಸಚಿವ ಶಿವಶಂಕರ ರೆಡ್ಡಿ ಮಳೆಹಾನಿಯಿಂದ ಗುಡ್ಡೆಹೊಸೂರಿನ ಬಳಿ ಮುಸುಕಿನ ಜೋಳದ ಬೆಳೆ ನಾಶವಾಗಿರುವದನ್ನು ವೀಕ್ಷಿಸಿದರು. ಈ ಸಂದರ್ಭ ಸೊಮವಾರಪೇಟೆ ತಾ.ಕೃಷಿ ಅಧಿಕಾರಿ ಡಾ. ರಾಜಶೇಖರ್ ಮತ್ತು ಕುಶಾಲನಗರ ಹೋಬಳಿ ಅಧಿಕಾರಿ ಪೂಣಚ್ಚ ಮುಂತಾದವರು ಹಾಜರಿದ್ದರು. ಈ ಸಂದರ್ಭ ಮಾತನಾಡಿದ ಸಚಿವರು ಪ್ರತಿ ಗ್ರಾಮ.ಪಂ.ಮಟ್ಟದಲ್ಲಿ ಇಲಾಖಾ ವತಿಯಿಂದ ವರದಿ ಸಿದ್ದಪಡಿಸಿ ಬೆಳೆನಷ್ಟವಾದ ರೈತರಿಗೆ ಸೂಕ್ತಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸುವದಾಗಿ ತಿಳಿಸಿದರು.

- ಗಣೇಶ್ ಕುಡೆಕ್ಕಲ್