ಮಡಿಕೇರಿ, ಆ. 28: ಅತಿವೃಷ್ಟಿಯಿಂದ ಕೊಡಗಿನಲ್ಲಿ ಅತೀವ ಬೆಳೆಹಾನಿ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಬೆಳೆ ಪರಿಹಾರಕ್ಕಾಗಿ ಕೊಡಗಿಗೆ ವಿಶೇಷ ಪ್ಯಾಕೆಜ್ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವದಾಗಿ ರಾಜ್ಯ ಕೃಷಿ ಇಲಾಖೆ ಸಚಿವ ಶಿವಶಂಕರ್ ರೆಡ್ಡಿ ಭರವಸೆ ನೀಡಿದ್ದಾರೆ. ಕೊಡಗಿಗೆ ಇಂದು ಭೇಟಿ ನೀಡಿದ್ದ ಅವರು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಾನು ಕೊಡಗಿಗೆ ಬಂದಿದ್ದೇನೆ. 25 ಸಾವಿರ ಎಕ್ರೆ ಭತ್ತದ ಬೆಳೆ ನಾಶವಾಗಿದೆ. ಶೇ. 30 ರಷ್ಟು ಬೆಳೆ ಹಾನಿಯನ್ನು ಆಯುಷ್ ಮೂಲಕ ಸಮೀಕ್ಷೆ ನಡೆಸಿದ್ದೇವೆ. ಇನ್ನು 15 ದಿನದಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ ಎಂದರು.4 ಸಾವಿರ ಎಕ್ರೆ ಮುಸುಕಿನ ಜೋಳ ಬೆಳೆ ನಾಶವಾಗಿದೆ. ಒಂದು ಲಕ್ಷ ಹೆಕ್ಟೇರ್ ಕಾಫಿ ನಾಶವಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆ ನಾಶವಾಗಿದ್ದು, ಪ್ರಸ್ತುತ ಬೆಳೆ ಬೆಳೆಯಲು ಬಯಸುವ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ (ಮೊದಲ ಪುಟದಿಂದ) ಅರವತ್ತು ಮಂದಿ ಅಧಿಕಾರಿಗಳು ಬೆಳೆ ನಾಶ ಸಮೀಕ್ಷೆ ಮಾಡಿ ಸಲ್ಲಿಸುವ ವರದಿ ಆಧರಿಸಿ 20 ದಿನದೊಳಗೆ ಪರಿಹಾರ ನೀಡಲಾಗುವದೆಂದು ಸಚಿವರು ತಿಳಿಸಿದರು ಭೂಕುಸಿತದಿಂದ ಕೂಡ ಕೃಷಿ ಭೂಮಿಗಳು ನಾಶವಾಗಿದೆ. 11 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದ್ದು, 8 ಸಾವಿರ ಹೆಕ್ಟೇರ್ ಕರಿಮೆಣಸು, 2 ಸಾವಿರ ಹೆಕ್ಟೇರ್ ಅಡಿಕೆ ನಾಶವಾಗಿದೆ. ಅಂದಾಜು 82 ಕೋಟಿ ನಷ್ಟವಾಗಿದೆ.
ಅಂದಾಜು 250 ಕೋಟಿ ಮೌಲ್ಯದ ಕಾಫಿ ಬೆಳೆ ನಾಶವಾಗಿದೆ ಎಂದು ಶಿವಶಂಕರ್ ರೆಡ್ಡಿ ನುಡಿದರು. ಶಾಸಕ ಅಪ್ಪಚ್ಚು ರಂಜನ್ ಇದ್ದರು.