ವೀರಾಜಪೇಟೆ, ಆ. 27: ಕಾವೇರಿ ಪದವಿ ಕಾಲೇಜಿನಲ್ಲಿ ಕುಪ್ಪಡಿರ ಎಸ್ ಮಾಡಮಯ್ಯ ಅವರ ಜ್ಞಾಪಕಾರ್ತವಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾಷಣದ ವಿಷಯ ಕನ್ನಡದಲ್ಲಿ ಭ್ರಷ್ಟರಹಿತ ಸ್ವಾತಂತ್ರ್ಯ ಭಾರತ ಹಾಗೂ ಆಂಗ್ಲ ಭಾಷೆಯಲ್ಲಿ ಫ್ರೀಡಂ ಪೈಟರ್ಸ್ ಆಫ್ ಕೂರ್ಗ್ .ಈ ಸ್ಪರ್ಧೆಯಲ್ಲಿ 10 ಸ್ಪರ್ಧಿಗಳು ಭಾಗವಹಿಸಿದ್ದರು ಹಾಗೂ ಕಾಲೇಜಿನ ಉಪನ್ಯಾಸಕರಾದ ಕೆ.ಜಿ. ವೀಣಾ ಆಂಗ್ಲ ಭಾಷಾ ಉಪಾನ್ಯಾಸಕಿ, ರೇವತಿ ಕನ್ನಡ ಉಪನ್ಯಾಸಕಿ, ಡಾ. ಮುತ್ತಮ್ಮ ಗ್ರಂಥಪಾಲಕಿ, ಮುಖ್ಯ ತೀರ್ಪುಗಾರರಾಗಿದ್ದರು. ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ದಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಈ ಕಾರ್ಯಕ್ರಮವನ್ನು ಕಾಲೇಜಿನ ಸಾಂಸ್ಕೃತಿಕ ಸಮೀತಿ ಸಂಚಾಲಕಿ ಅಕ್ಷತ ನಾಯ್ಕ ಟಿ. ರಾಜಶಾಸ್ತ್ರ ವಿಭಾಗ ಇವರು ಆಯೋಜಿಸಿದ್ದರು, ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.