ಸೋಮವಾರಪೇಟೆ, ಆ. 28: ಭಯಾನಕ ಭೂಕುಸಿತಕ್ಕೆ ಸಿಲುಕಿ ಮನೆಯೊಂದಿಗೆ ಮಣ್ಣು ಸೇರಿದ್ದ ಮೂವತ್ತೊಕ್ಲು ಗ್ರಾಮದ ಮುಕ್ಕಾಟಿರ ಉತ್ತಪ್ಪ (ಸಾಬು-62) ಅವರ ಮೃತದೇಹವನ್ನು 12 ದಿನಗಳ ಬಳಿಕ ಹೊರಕ್ಕೆ ತೆಗೆಯಲಾಯಿತು. ಈ 12 ದಿನಗಳಲ್ಲಿ 4 ಬಾರಿ ಕಾರ್ಯಾಚರಣೆ ನಡೆಸಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ. ಇಂದು ನಡೆದ 5ನೇ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ.ಕಳೆದ ತಾ. 16ರಂದು ಸಂಜೆ 4.30ರ ಸುಮಾರಿಗೆ ಭಾರೀ ಮಳೆಯಾಗುತ್ತಿದ್ದ ಸಂದರ್ಭ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ನಡೆಸಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ. ಇಂದು ನಡೆದ 5ನೇ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಕಳೆದ ತಾ. 16ರಂದು ಸಂಜೆ 4.30ರ ಸುಮಾರಿಗೆ ಭಾರೀ ಮಳೆಯಾಗುತ್ತಿದ್ದ ಸಂದರ್ಭ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಮುಚ್ಚಲ್ಪಟ್ಟಿತ್ತು. ಇದಾಗಿ ಸತತ 2 ದಿನಗಳ ಕಾಲ ಭಾರೀ ಮಳೆಯಾಗಿದ್ದ ರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ 4 ಬಾರಿ ಜೆಸಿಬಿಗಳ ಸಹಾಯದಿಂದ ಮೃತದೇಹವನ್ನು ಪತ್ತೆಹಚ್ಚುವ ಕಾರ್ಯಾಚರಣೆಗೆ ಇಳಿದಿದ್ದರೂ ಯಶಸ್ವಿಯಾಗಿರಲಿಲ್ಲ.

ಇಂದು ಬೆಳಿಗ್ಗೆ 9 ಗಂಟೆಯಿಂದ ಹಿಟಾಚಿ ಯಂತ್ರದ ಮೂಲಕ ಕಾರ್ಯಾಚರಣೆಗೆ ಇಳಿದ ಶಾಸಕ ಅಪ್ಪಚ್ಚು ರಂಜನ್, ಅಂಗರಕ್ಷಕ ಲೋಕೇಶ್, ಡಿವೈಎಸ್‍ಪಿ ಮುರಳೀಧರ್, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿಗಳಾದ ಜಗದೀಶ್, ಶಿವಸ್ವಾಮಿ, ಪ್ರವೀಣ್, ಪರಮೇಶ್, ಕುಮಾರ್ ಸೇರಿದಂತೆ ಮೂವತ್ತೊಕ್ಲು ಗ್ರಾಮಸ್ಥರು, ಗರುಡ ಫೋರ್ಸ್, (ಮೊದಲ ಪುಟದಿಂದ) ಶ್ವಾನದಳ ಸಿಬ್ಬಂದಿಗಳು ಎರಡೂ ಮುಕ್ಕಾಲು ಗಂಟೆಗಳ ನಂತರ ಮೃತದೇಹವನ್ನು ಪತ್ತೆಹಚ್ಚಿದರು.

ಮನೆಯಿದ್ದ ಸ್ಥಳದಿಂದ ಸುಮಾರು 80 ಅಡಿಗಳಷ್ಟು ದೂರ, 6 ಅಡಿ ಆಳದ ಕೆಸರಿನಲ್ಲಿ ಮೃತದೇಹ ಮುಚ್ಚಿಹೋಗಿತ್ತು. ಹಿಟಾಚಿ ಯಂತ್ರದ ಮೂಲಕ ಮೃತದೇಹವನ್ನು ಹೊರತೆಗೆಯಲಾಯಿತು. ಮಡಿಕೇರಿಯಿಂದ ಆಗಮಿಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ಓರ್ವ ವೈದ್ಯರು ಹಾಗೂ 7 ಮಂದಿ ಸಿಬ್ಬಂದಿಗಳು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

7 ಬಾರಿ ಭೇಟಿ ನೀಡಿದ್ದ ರಂಜನ್: ಮೂವತ್ತೊಕ್ಲಿನ ಉತ್ತಪ್ಪ ಅವರು ಭೂ ಸಮಾಧಿಯಾದ ದಿನದಿಂದ ಇಲ್ಲಿಯವರೆಗೆ ಶಾಸಕ ಅಪ್ಪಚ್ಚು ರಂಜನ್ ಅವರು 7 ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. 4 ದಿನಗಳು ಯಂತ್ರಗಳ ಸಹಾಯದಿಂದ ಮೃತದೇಹವನ್ನು ಪತ್ತೆಹಚ್ಚಲು ಮುಂದಾಗಿದ್ದರು. ಆದರೆ ಭಾರೀ ಮಳೆ ಹಾಗೂ ಅರ್ಧ ಏಕರೆಗೂ ಅಧಿಕ ಪ್ರದೇಶದಲ್ಲಿ ಕೆಸರು ಇದ್ದಿದ್ದರಿಂದ ಜೆಸಿಬಿ ಯಂತ್ರಗಳು ಕಾರ್ಯಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಹಿಟಾಚಿ ಯಂತ್ರದಿಂದ ಕಾರ್ಯಾಚರಣೆಗೆ ಇಳಿದಿದ್ದರಿಂದ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ಮಾಹಿತಿಯಿತ್ತರು. ಸಂಜೆ ಉತ್ತಪ್ಪ ಅವರ ಅಂತಿಮ ಸಂಸ್ಕಾರವನ್ನು ಕೊಡವ ಸಂಪ್ರದಾಯದಂತೆ ಸ್ವಗ್ರಾಮದಲ್ಲಿ ನಡೆಸಲಾಯಿತು. ಮೃತ ಉತ್ತಪ್ಪ ಅವರು ಪತ್ನಿ, ಅಂಗನವಾಡಿ ಶಿಕ್ಷಕಿ ಪಿ.ಎ. ತಂಗಮ್ಮ ಸೇರಿದಂತೆ ತಿಲಕ್ ಮತ್ತು ದೀಪಕ್ ಎಂಬ ಈರ್ವರು ಪುತ್ರರನ್ನು ಅಗಲಿದ್ದಾರೆ.

5ಲಕ್ಷ ಪರಿಹಾರ ವಿತರಣೆ: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಮುಕ್ಕಾಟಿರ ಉತ್ತಪ್ಪ ಅವರ ಕುಟುಂಬಕ್ಕೆ ಸರ್ಕಾರದಿಂದ ನೀಡಲ್ಪಡುವ ರೂ. 5 ಲಕ್ಷ ಪರಿಹಾರ ಹಾಗೂ ಸಂತ್ರಸ್ತ ಕುಟುಂಬದ ಪರಿಹಾರಾರ್ಥ 3,800 ರೂ.ಗಳ ಚೆಕ್‍ನ್ನು ಹಸ್ತಾಂತರಿಸಲಾಯಿತು. ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ತಾಲೂಕು ತಹಶೀಲ್ದಾರ್ ಮಹೇಶ್, ಮಾದಾಪುರ ಗ್ರಾ.ಪಂ. ಸದಸ್ಯ ಉಮೇಶ್ ಸೇರಿದಂತೆ ಇತರರು ಈ ಸಂದರ್ಭ ಹಾಜರಿದ್ದರು.

ಪತಿಯ ಸುಳಿವಿಗಾಗಿ ಕಾದಿದ್ದ ಪತ್ನಿ: ‘ನನಗೆ ಮನೆ, ಚಿನ್ನ, ಬೆಳ್ಳಿ, ಆಸ್ತಿ,ಪಾಸ್ತಿ ಏನೂ ಬೇಡ, ನನ್ನ ಪತಿಯ ಬಗ್ಗೆ ಸಣ್ಣ ಸುಳಿವಾದರೂ ಬೇಕು’ ಎಂದು ಕಳೆದ 12 ದಿನಗಳಿಂದ ಉತ್ತಪ್ಪ ಅವರ ಪತ್ನಿ ತಂಗಮ್ಮ ಕಾದು ಕುಳಿತಿದ್ದರು. ತಾ. 16 ರಂದೇ ಬಂಧುಗಳ ಮನೆಗೆ ತೆರಳಿದ್ದ ಇವರು, ಕಾರ್ಯಾಚರಣೆ ನಡೆಯುವ ದಿನಗಳಂದು ಮೂವತ್ತೊಕ್ಲಿಗೆ ಬಂದು ಪತಿಯ ಸುಳಿವಿಗಾಗಿ ಹಂಬಲಿಸುತ್ತಿದ್ದರು.

‘ತಾ. 17ರಂದು ಮನೆ ಖಾಲಿ ಮಾಡುವ ಯೋಚನೆ ಮಾಡಿದ್ದೆವು. ಆದರೆ 16ರ ಸಂಜೆಯೇ ಮನೆಯೊಂದಿಗೆ ಪತಿಯೂ ಕಣ್ಮರೆಯಾಗಿದರು. ಜೀವದ ಮೇಲೆ ತುಂಬಾ ಆಸೆ ಇತ್ತು ಅವರಿಗೆ..’ ಎಂದು ತಂಗಮ್ಮ ಹೇಳುವಾಗ ಅವರ ಕಣ್ಣಾಲಿಗಳು ತುಂಬಿದ್ದವು.