ಗೋಣಿಕೊಪ್ಪಲು, ಆ.28: ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನವಸತಿ ಪ್ರದೇಶವಾದ ಗಣಪತಿ ನಗರದಲ್ಲಿ ಗ್ರಾಮ ಪಂಚಾಯ್ತಿಯ ಅನುಮತಿ ಇಲ್ಲದೆ ಗ್ರಾಮೀಣ ಕೂಟದ ಹೆಸರಿನಲ್ಲಿ ಹಣಕಾಸು ವಹಿವಾಟು ನಡೆಸುತ್ತಿದ್ದ ಮನೆಯ ಮೇಲೆ ಪಂಚಾಯಿತಿ ನೇತೃತ್ವದಲ್ಲಿ ದಿಢೀರ್ ಧಾಳಿ ನಡೆಸಿ ವಹಿವಾಟನ್ನು ಸ್ಥಗಿತಗೊಳಿಸಲಾಯಿತು.

ಪೊನ್ನಂಪೇಟೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಮೂಕಳೇರ ಸುಮಿತಾ,ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸುರೇಶ್ ಪಂಚಾಯ್ತಿ ಸದಸ್ಯರಾದ ಮೂಕಳೇರ ಲಕ್ಷ್ಮಣ,ಅಮ್ಮತ್ತೀರ ಸುರೇಶ್, ಪೊನ್ನಂಪೇಟೆ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಧಾಳಿ ನಡೆಸಿದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಮೀಪದ ಕೇರಳ ರಾಜ್ಯದ ತೋಲ್ಪಟ್ಟಿ,ಮಾನಂದವಾಡಿ,ಇನ್ನಿತರ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಇಲ್ಲಿಯ ಬಡ ವರ್ಗದ ಜನತೆಗೆ, ಮಹಿಳೆಯರಿಗೆ ಸಾಲದ ರೂಪದಲ್ಲಿ ದುಪ್ಪಟ್ಟು ಬಡ್ಡಿ ದರ ನಿಗದಿ ಪಡಿಸಿ ಹಣದ ವ್ಯವಹಾರ ನಡೆಸುತ್ತಿರುವುದು ಕಂಡು ಬಂತು. ಜನ ವಸತಿ ಪ್ರದೇಶದಲ್ಲಿ ಕೇರಳ ರಾಜ್ಯದ ಹಲವು ವಾಹನಗಳು ದಿನನಿತ್ಯ ಬರುತ್ತಿದ್ದು ಈ ಭಾಗದ ಜನತೆಗೆ ಭಾರಿ ಕಿರಿಕಿರಿಯನ್ನುಂಟು ಮಾಡಿತ್ತು. ಈ ಬಗ್ಗೆ ಸಾರ್ವಜನಿಕರು ಪಂಚಾಯ್ತಿಗೆ ದೂರು ನೀಡಿದ್ದರು. ಪಂಚಾಯ್ತಿ ವಾರ್ಡ್ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದ ಸದಸ್ಯರು ವಸತಿ ಪ್ರದೇಶದಲ್ಲಿ ಪಂಚಾಯ್ತಿ ಅನುಮತಿ ಇಲ್ಲದೆ ನಡೆಸುತ್ತಿರುವ ವಹಿವಾಟುವಿನ ಬಗ್ಗೆ ಚರ್ಚೆ ನಡೆಯಿತು.

ನಂತರ ಪೊಲೀಸರ ಸಹಕಾರದಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪಂಚಾಯ್ತಿಯ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ಹಣಕಾಸು ವಹಿವಾಟು ನಡೆಯುತ್ತಿರುವದು ಕಂಡು ಬಂತು.ಪ್ರತಿನಿತ್ಯ ಲಕ್ಷಾಂತರ ಹಣದ ವಹಿವಾಟು ನಡೆಸುತ್ತಿದ್ದು ಕೆಲ ಯುವಕರು ಪ್ರತಿವಾರಕ್ಕೊಮ್ಮೆ ಸಾಲಗಾರರ ಮನೆಗೆ ತೆರಳಿ ಹಣ

ಭಾಗದ ಜನತೆಗೆ ಭಾರಿ ಕಿರಿಕಿರಿಯನ್ನುಂಟು ಮಾಡಿತ್ತು. ಈ ಬಗ್ಗೆ ಸಾರ್ವಜನಿಕರು ಪಂಚಾಯ್ತಿಗೆ ದೂರು ನೀಡಿದ್ದರು. ಪಂಚಾಯ್ತಿ ವಾರ್ಡ್ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದ ಸದಸ್ಯರು ವಸತಿ ಪ್ರದೇಶದಲ್ಲಿ ಪಂಚಾಯ್ತಿ ಅನುಮತಿ ಇಲ್ಲದೆ ನಡೆಸುತ್ತಿರುವ ವಹಿವಾಟುವಿನ ಬಗ್ಗೆ ಚರ್ಚೆ ನಡೆಯಿತು.

ನಂತರ ಪೊಲೀಸರ ಸಹಕಾರದಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪಂಚಾಯ್ತಿಯ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ಹಣಕಾಸು ವಹಿವಾಟು ನಡೆಯುತ್ತಿರುವದು ಕಂಡು ಬಂತು.ಪ್ರತಿನಿತ್ಯ ಲಕ್ಷಾಂತರ ಹಣದ ವಹಿವಾಟು ನಡೆಸುತ್ತಿದ್ದು ಕೆಲ ಯುವಕರು ಪ್ರತಿವಾರಕ್ಕೊಮ್ಮೆ ಸಾಲಗಾರರ ಮನೆಗೆ ತೆರಳಿ ಹಣ