ಕೂಡಿಗೆ, ಆ. 28: ಅರಣ್ಯ ಇಲಾಖೆಯ ವತಿಯಿಂದ ಕೊಡಗು ವೃತ್ತದ ಮಡಿಕೇರಿ ವಿಭಾಗದ ಅರಣ್ಯ ವೀಕ್ಷಕರ ನೇರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ದೈಹಿಕ ಸಾಮಥ್ರ್ಯ ಪರೀಕ್ಷೆಯು ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು. ರಾಜ್ಯಾದ್ಯಂತ ಅರ್ಜಿ ಸಲ್ಲಿಸಿದ್ದ 124 ಅಭ್ಯರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 25 ಮಹಿಳಾ ಅಭ್ಯರ್ಥಿಗಳು ಇದ್ದರು. ಈ ಸಂದರ್ಭ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಂಜುನಾಥ್, ವೈಲ್ಡ್‍ಲೈಫ್ ಡಿಎಫ್‍ಓ ಜಯ, ಎಸಿಎಫ್ ಚಿಣ್ಣಪ್ಪ, ಮಂಜುನಾಥ್, ಜ್ಯೋತಿ, ಜೀವನ್ ಕುಮಾರ್, ಕೊಟ್ಯರಪ್ಪ, ಹಾಗೂ ಜಿಲ್ಲೆಯ ವಿವಿಧ ಅರಣ್ಯ ವಲಯಾಧಿಕಾರಿಗಳು ಇದ್ದರು.