ಗೋಣಿಕೊಪ್ಪಲು, ಆ. 28: ಸಮಾಜದಲ್ಲಿರುವ ಜಾತಿ, ಮತ ಎಲ್ಲವನ್ನು ದಾಟಿ ನಾವು ಸೇವೆ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಪ್ರಚಾರಕ್ ಅವಿನಾಶ್ ಹೇಳಿದರು. ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ರಕ್ಷಾ ಬಂಧನ ಆಚರಣೆಯಲ್ಲಿ ಅವರು ಮಾತನಾಡಿದರು. ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯತೀಶ್, ಮುರುಗೇಶ್ ಉಪಸ್ಥಿತರಿದ್ದರು. ವಸಂತಿ ಪ್ರಾರ್ಥಿಸಿದರೆ, ಉಪನ್ಯಾಸಕ ಎಂ.ಎನ್. ವನಿತ್ ಕುಮಾರ್ ವಂದಿಸಿದರು, ಅಂಜೂಷ ನಿರೂಪಿಸಿದರು.