ಪ್ರತ್ಯಕ್ಷ ವರದಿ: ಪ್ರಜ್ಞಾ ಜಿ.ಆರ್ಮ ಡಿಕೇರಿ: ಮಂಜಿನಿಂದ ಮುಸುಕಿದ ಈ ಪ್ರದೇಶವು ನರಕ ಸದೃಶವಾಗಿ ಗೋಚರಿಸುತ್ತಿತ್ತಲ್ಲದೆ ಅಲ್ಲಲ್ಲಿ ಕೊಳೆತ ಪ್ರಾಣಿಗಳ ಮೃತದೇಹದ ವಾಸನೆ ಎಲ್ಲೆಡೆ ಹಬ್ಬಿ ಯಮಾಲಯದ ಮೆಟ್ಟಲೇರುವಂತೆ ಭಾಸವಾಗುತ್ತಿತ್ತು. ದಾರಿಯುದ್ದಕ್ಕೂ ನಮ್ಮೊಂದಿಗಿದ್ದ ಅಲ್ಲಿನ ಹಳ್ಳಿಯವರು ‘ಇಲ್ಲಿ ಅಡಿಕೆ ತೋಟವಿತ್ತು, ಇಲ್ಲಿ ಚಿಕ್ಕ ಹೊಳೆಯೊಂದಿತ್ತು, ಇಲ್ಲಿ ಅವರು ಮೀನು ಸಾಕಿದ್ದರು...’ ಅನ್ನುವ ಮಾತುಗಳು ಕೇಳಿಸಿಕೊಳ್ಳುತ್ತಿದ್ದೇವಷ್ಟೇ ಹೊರತು ಈ ಜಾಗಗಳಲ್ಲಿ ಅವೆಲ್ಲಾ ಇತ್ತು ಎಂಬುವದನ್ನು ಕಲ್ಪಿಸಿ ಕೊಳ್ಳ ಲಾಗುತ್ತಿ ರಲಿಲ್ಲ! ಇದು 2ನೇ ಮೊಣ್ಣಂಗೇರಿಯ ಇಂದಿನ ಸ್ಥಿತಿ.ಗ್ರಾಮಸ್ಥರೊಬ್ಬರು ತಮ್ಮೂರಿಗಾದ ನೋವನ್ನು ಯಾರೊಬ್ಬರೂ ಹೊರಜಗತ್ತಿಗೆ
ತಿಳಿಸಿಲ್ಲವೆಂದು
ದು:ಖಪಡುತ್ತಾರೆ. ನಿಶಾನೆ ಮೊಟ್ಟೆಯಿಂದ ಜರಿದು ಬಂದ ಗುಡ್ಡದ ಮಣ್ಣು 2ನೇ ಮೊಣ್ಣಂಗೇರಿ ಯನ್ನು ನುಂಗಿ ನೀರು ಮಾಡಿದೆ. ಕಾಂಕ್ರೀಟ್ ಸೇತುವೆ, ಅನೇಕ ಮನೆಗಳು, ಎಕರೆಗಟ್ಟಲೆ ತೋಟಗಳು... ಕೆಲವೊಂದು ಮನೆಗಳು ಭೂಮಿಗೆ ಹೂತಿಕೊಂಡಂತ್ತಿದ್ದರೆ, ಇನ್ನು ಕೆಲವು ಕಾಣೆಯಾಗಿವೆ.
ಈ ಜಾಗಗಳಲ್ಲಿ ಅವೆಲ್ಲಾ ಇತ್ತು ಎಂಬುವದನ್ನು ಕಲ್ಪಿಸಿ ಕೊಳ್ಳ ಲಾಗುತ್ತಿ ರಲಿಲ್ಲ! ಇದು 2ನೇ
ಮೊಣ್ಣಂಗೇರಿಯ
ಇಂದಿನ ಸ್ಥಿತಿ.
ಗ್ರಾಮಸ್ಥರೊಬ್ಬರು ತಮ್ಮೂರಿಗಾದ
ನೋವನ್ನು
ಯಾರೊಬ್ಬರೂ
ಹೊರಜಗತ್ತಿಗೆ
ತಿಳಿಸಿಲ್ಲವೆಂದು
ದು:ಖಪಡುತ್ತಾರೆ. ನಿಶಾನೆ ಮೊಟ್ಟೆಯಿಂದ ಜರಿದು ಬಂದ ಗುಡ್ಡದ ಮಣ್ಣು 2ನೇ ಮೊಣ್ಣಂಗೇರಿ ಯನ್ನು ನುಂಗಿ ನೀರು ಮಾಡಿದೆ. ಕಾಂಕ್ರೀಟ್ ಸೇತುವೆ, ಅನೇಕ ಮನೆಗಳು, ಎಕರೆಗಟ್ಟಲೆ ತೋಟಗಳು... ಕೆಲವೊಂದು ಮನೆಗಳು ಭೂಮಿಗೆ ಹೂತಿಕೊಂಡಂತ್ತಿದ್ದರೆ, ಇನ್ನು ಕೆಲವು ಕಾಣೆಯಾಗಿವೆ.
ಕೊನೆಯುಸಿರೆಳೆದಿವೆ. ರಸ್ತೆ, ವಿದ್ಯುತ್, ಮೊಬೈಲ್ ನೆಟ್ವರ್ಕ್ಗಳನ್ನು ಇತ್ತಿಚೆಗಷ್ಟೇ ಕಂಡ ಈ ಗ್ರಾಮವು ಈಗ ದಶಮಾನಗಳಷ್ಟು ಹಿಂದಕ್ಕೆ ತೆರಳಿದಷ್ಟೇಯಲ್ಲದೆ ಸರಿಪಡಿಸ ಲಾಗದಷ್ಟು ಹಾನಿಗೊಳಗಾಗಿದೆ. ಆದರೂ, ಇಲ್ಲಿಯ ಜನರು ಒಬ್ಬರಿಗೊಬ್ಬರು ಸಹಕಾರಿಗಳೆಂಬಂತೆ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮನೆಮಠ ಬಿಟ್ಟು ಪರಿಹಾರ ಕೇಂದ್ರಗಳಲ್ಲಿರುವ ಇಲ್ಲಿಯ ಗ್ರಾಮಸ್ಥರು ಎರಡು ದಿನಕ್ಕೊಮ್ಮೆ ತಮ್ಮ ಮನೆಯತ್ತ ತೆರಳಿ ತಾವು ಸಾಕಿದ ಜಾನುವಾರುಗಳಿಗೆ ಆಹಾರ ನೀಡಿ ಬರುತ್ತಾರೆ. “ನಮ್ಮ ಗ್ರಾಮದ ರಸ್ತೆಗಳೆಲ್ಲ ನಾಶವಾಗಿದ್ದು ನಾವು ಬೆಟ್ಟ ಗುಡ್ಡ ಏರಿಳಿದು ಮನೆಯತ್ತ ಹೋಗುತ್ತೇವೆ. ಇದೀಗ ಶಾಲೆ ಪ್ರಾರಂಭವಾದ್ದರಿಂದ ನಾನು ನನ್ನ ಮಕ್ಕಳ ಪುಸ್ತಕ ಹಾಗೂ ಬ್ಯಾಗ್ ತೆಗೆದುಕೊಂಡು ಹೋಗಲು ಬಂದಿದ್ದೇನೆ,” ಎಂದು ಸಾವಿತ್ರಿಯವರು ತಿಳಿಸುತ್ತಾರೆ. ಇನ್ನು ಮುಪ್ಪಿನ ವಯಸ್ಸಿನ ನಾರಾಯಣ ಅವರು, ತಮ್ಮ ಮನೆಗೆ ತೆರಳಲು ಅಸಾಧ್ಯವೆಂದು ತಿಳಿದರೂ ಸಹ, ಇತರರೊಡಗೂಡಿ ಹಸುವಿಗೆ ಹಿಂಡಿ ಹೊತ್ತುಕೊಂಡು ಬಿರುಸಿನಿಂದ ಬಿರುಕು ಬಿಟ್ಟ ಪ್ರದೇಶಗಳಲ್ಲಿ, ತಾವು ತಂಗಿದ್ದ ಪರಿಹಾರ ಕೇಂದ್ರದಲ್ಲಿ ನೀಡಿದ ಹೊಸ ಶೂ (ಮಾರ್ಗದ ಕೊನೆಯಲ್ಲಿ ಅದು ಕಿತ್ತುಹೋಗಿದ್ದರೂ) ಧರಿಸಿ ನಡೆದಾಡುತ್ತಾರೆ. ಅಲ್ಲಿನ ತೋಟದ ಕೆಲಸಗಾರರೂ, ಮುಂದಿನ ಬದುಕೇನೆಂಬ ಚಿಂತೆಗೊಳ ಗಾಗಿದ್ದರೂ, ಇತರ ಗ್ರಾಮಸ್ಥರಿಗೆ ತಮ್ಮ ಮನೆಯತ್ತ ತೆರಳಲು ಸ್ವಲ್ಪ ಅನುಕೂಲವಾಗಲೆನ್ನುವ ಉದ್ದೇಶದಿಂದ ರೌದ್ರಾವತಾರದಿಂದ ಹರಿಯುವ ಕೆಂಪು ಹೊಳೆಯಮೇಲೆ ತಾತ್ಕಾಲಿಕ ಸೇತುವೆ ಕಟ್ಟಿ, ಅತ್ತ ಇತ್ತ ಇಬ್ಬರು ಹಗ್ಗಗಳನ್ನು ಬಿಗಿದಿಡಿದು ಗ್ರಾಮಸ್ಥರ ನೆರವಿಗೆ ಮುಂದಾಗಿದ್ದಾರೆ. ಈ ಸೇತುವೆಗಿಂತ ಸ್ವಲ್ಪ ದೂರದಲ್ಲಿ ಮುಖ್ಯ (ಗ್ರಾಮಕ್ಕೆ ಸೀಮಿತವಲ್ಲದ) ವಿದ್ಯುತ್ ಕಂಬಗಳನ್ನು, ಮುಖ್ಯ ಹೆದ್ದಾರಿ ರಸ್ತೆಯನ್ನು ಜೆಸಿಬಿ, ಹಿಟಾಚಿ ಮೂಲಕ ಸರಿಪಡಿಸುತ್ತಿದಾರೆಯೇ ಹೊರತು ಈ ಗ್ರಾಮದತ್ತ ಯಾರೂ ತಲೆಹಾಕಲಿಲ್ಲ ಎಂಬದು ಅಲ್ಲಿನ ಗ್ರಾಮಸ್ಥರ ಕೊರಗು. ಬಟ್ಟೆ, ಆಹಾರ ಹಾಗೂ ಇನ್ನಿತರ ಸೌಕರ್ಯಗಳನ್ನು ಇವರಿಗೆ ಸರಕಾರ ಕಲ್ಪಿಸಿಕೊಟ್ಟರೂ ಇವರ ಗ್ರಾಮವನ್ನು ಯಾರು, ಯಾವಾಗ ಸರಿಪಡಿಸುತ್ತಾರೆ? ಈ ಗ್ರಾಮಕ್ಕೆ ಪುನಃ ರಸ್ತೆ ಕಲ್ಪಿಸಿಕೊಡುತ್ತಾರೆಯೇ? ಇಲ್ಲಿಯ ಬಿರುಕು ಬಿಟ್ಟ ಭೂಮಿ ಹೇಗೆ ಸರಿಯಾಗಬಹುದು? ತೋಟ ನಾಶವಾಯ್ತು, ಮುಂದೇನು? ಎಂಬೆಲ್ಲಾ ಪ್ರಶ್ನೆಗಳು ಇಲ್ಲಿನ ಪ್ರೇತರೂಪ ಪ್ರಕೃತಿಯ ಮಡಿಲಲ್ಲಿ ಜನರನ್ನು ಕಾಡುತ್ತಿದೆ...