ಕುಶಾಲನಗರ, ಆ. 28: ಮಡಿಕೇರಿಯಿಂದ ಕುಶಾಲನಗರಕ್ಕೆ ಸ್ಥಳಾಂತರಗೊಂಡ ಸಂತ್ರಸ್ತರು ಮೂಲಭೂತ ಸೌಕರ್ಯಗಳ ಕೊರತೆ ಕಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. 220 ಸಂತ್ರಸ್ತರನ್ನು ಮಡಿಕೇರಿಯಿಂದ ಕುಶಾಲನಗರದ ಗುಮ್ಮನಕೊಲ್ಲಿಯ ವಾಲ್ಮೀಕಿ ಭವನ ಮತ್ತು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.

ಸ್ಥಳಾಂತರ ಮಾಡುವ ಸಂದರ್ಭ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿ ಇದೀಗ ಕೇಂದ್ರದಲ್ಲಿ ಬೆರಳೆಣಿಕೆಯ ಶೌಚಾಲಯಗಳಿವೆ. ಸಮರ್ಪಕವಾಗಿ ಚಾಪೆ, ಟಾರ್ಪಲ್ ಕೊರತೆ ಉಂಟಾಗಿದೆ ಎಂದು ಸಂತ್ರಸ್ತರಾದ ಗಣೇಶ್, ಜಲಜಾ, ಮಹಾದೇವಿ ಮತ್ತಿತರರು ಸ್ಥಳದಲ್ಲಿದ್ದ ಸುದ್ದಿಗಾರರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಮರಳಿ ಮಡಿಕೇರಿಗೆ ಸ್ಥಳಾಂತರಿಸುವಂತೆ ಕೋರಿದ್ದಾರೆ.

ಮುಳ್ಳುಸೋಗೆ ಗ್ರಾ.ಪಂ. ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದ್ದು, ಸ್ವಚ್ಛತೆÉ, ಕುಡಿಯುವ ನೀರು ಸೇರಿದಂತೆ ಮೊಬೈಲ್ ಶೌಚಾಲಯಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದು ತಾಲೂಕು ತಹಶೀಲ್ದಾರ್ ಎಸ್. ಮಹೇಶ್ ಪ್ರತಿಕ್ರಿಯಿಸಿದ್ದು, ಸಂತ್ರಸ್ತರು ಸಹಕರಿಸುವಂತೆ ಮನವಿ ಮಾಡಿದ್ದಾರೆ.