ಮಡಿಕೇರಿ, ಆ. 28: ಮಡಿಕೇರಿಯ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ವತಿಯಿಂದ ನಗರದಲ್ಲಿರುವ ಅತಿವೃಷ್ಟಿ ಸಂತ್ರಸ್ತ ಕೇಂದ್ರಗಳಲ್ಲಿ ಸಾಂತ್ವನ ಕಾರ್ಯಕ್ರಮ ನಡೆಯಿತು.

ಅಲ್ಲದೆ ಎಲ್ಲಾ ಸಂತ್ರಸ್ತರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ನಡೆಸಲಾಯಿತು. ಅಲ್ಲದೆ ಎಲ್ಲ ಕೇಂದ್ರಗಳಲ್ಲಿಯೂ ಆಯಾ ದಿನ ಮಧ್ಯಾಹ್ನ ಭೋಜನ ಕಾರ್ಯಕ್ರಮವನ್ನು ಬ್ರಹ್ಮಕುಮಾರಿ ಸಂಸ್ಥೆಯ ಆಶ್ರಯದಲ್ಲಿ ನಡೆಸಲಾಯಿತು. ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪ, ಮೈತ್ರಿ ಭವನ, ಗೆಜ್ಜೆ ಸಂಗಪ್ಪ ಭವನ ಹಾಗೂ ಚೌಡೇಶ್ವರಿ ಭವನಗಳಲ್ಲಿ ನಾಲ್ಕು ದಿನ ಈ ಕಾರ್ಯಕ್ರಮಗಳನ್ನು ವಿದ್ಯಾಲಯ ಬ್ರಹ್ಮಕುಮಾರಿ ಪ್ರಮುಖರುಗಳಾದ ಗಾಯತ್ರಿ ಮತ್ತು ಧನಲಕ್ಷ್ಮಿ ಇವರುಗಳ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಲ್ಲದೆ ಸಂತ್ರಸ್ತರಿಗೆ ಆಗಿಂದಾಗೆ ಸಂಸ್ಥೆಯಿಂದ ನೈತಿಕ ಸ್ಥೈರ್ಯ ತುಂಬುವ ಆಧ್ಯಾತ್ಮ ಬೋಧನೆಯನ್ನು ಮಾಡಲಾಗುತ್ತಿದೆ.