ಕೂಡಿಗೆ, ಆ. 28: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಮಾಜಿ ಸೈನಿಕರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಲತಾ ಮಾತನಾಡಿ, ದೇಶಕ್ಕಾಗಿ ಹೋರಾಟ ಮಾಡಿದ ಗ್ರಾಮಾಂತರ ಪ್ರದೇಶದ ಮಾಜಿ ಸೈನಿಕರನ್ನು ಗುರುತಿಸಿ ಅವರನ್ನು ಗೌರವಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಮಾಜಿ ಸೈನಿಕರಾದ ಕರ್ನಲ್ ನಾರಾಯಣಮೂರ್ತಿ, ನಾಗರಾಜೇಗೌಡ, ಸದಾಶಿವ, ಪ್ರಸನ್ನ, ಹೆಚ್.ಪಿ. ರಾಜ್, ಹೆಚ್.ಡಿ. ರಾಜ್, ಲಿಂಗರಾಜ್, ಪುಟ್ಟೇಗೌಡ, ವಾಸುದೇವ, ದಾದಾ, ವೆಂಕಟೇಶ್, ನಂದಕುಮಾರ್, ಸುರೇಶ್, ಯತೀಶ್, ನಂದಕುಮಾರ್, ನಾಗಭೂಷಣ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ರಾಕೇಶ್ ಇದ್ದರು.