ಮಡಿಕೇರಿ, ಆ. 29: ಐ.ಬಿ.ಪಿ.ಎಸ್.ರವರು ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಖಾಲಿಯಿರುವ 4252 ಪ್ರೊಬೇಷನರಿ ಅಧಿಕಾರಿ/ಮ್ಯಾನೇಜ್ಮೆಂಟ್ ಟ್ರ್ಯೆನಿ (ಪಿಓ/ಎಂಟಿ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಆನ್ಲೈನ್ನಲ್ಲಿ hಣಣಠಿ://ibಠಿs.iಟಿ ಮುಖಾಂತರ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ತಾ. 4.9.2018 ಕೊನೆಯ ದಿನಾಂಕ. ನೇಮಕಾತಿಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನವನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯು ಆನ್ಲೈನ್ ಪರೀಕ್ಷೆಯಾಗಿರುತ್ತದೆ.
ವಿದ್ಯಾರ್ಹತೆ: ಯಾವದೇ ಪದವಿಯಲ್ಲಿ ಉತ್ತೀರ್ಣರಾಗಿದ್ದು, ದಿನಾಂಕ: 1.8.2018ಕ್ಕೆ ಕನಿಷ್ಟ 20 ವರ್ಷಗಳು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷಗಳು. ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳು. ಓ.ಬಿ.ಸಿ. ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗಳಾಗಿವೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.