ಮಡಿಕೇರಿ, ಆ. 29: ಮಕ್ಕಂದೂರು ಗ್ರಾಮದಲ್ಲಿ ರಸ್ತೆ ಕುಸಿದು ಹೋಗಿರುವದನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಆದೇಶದ ಮೇರೆ ದೆಹಲಿಯಿಂದ ಆರ್ಮಿ ಇಂಜಿನಿಯರ್ ಆಗಮಿಸಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಲೋಕೋಪಯೋಗಿ ಇಂಜಿನಿಯರ್, ಸೇರಿ ಹಾಲೇರಿಯಿಂದ ಸುಮಾರು 8 ಕಿ.ಮೀ. ನಡೆದು, ರಸ್ತೆ ದುರಸ್ತಿ ಪಡಿಸಲು ಯೋಜನೆ ರೂಪಿಸಲು ಪರಿಶೀಲಿಸಿದರು.