ಕೂಡಿಗೆ, ಆ. 29: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗಿರಿಜನ ಕಾಲೋನಿಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಎರಡು ಮನೆಗಳು ಕುಸಿದು ಭಾರೀ ನಷ್ಟ ಉಂಟಾಗಿದೆ. ಜೇನು ಕುರುಬರ ರಾಜು ಹಾಗೂ ಕುಸುಮ ಶಿವಪ್ಪ ಎಂಬವರಿಗೆ ಸೇರಿದ ಈ ಎರಡು ಮನೆಗಳು ಕುಸಿದ ಪರಿಣಾಮ ವಾಸ ಮಾಡಲು ತೊಂದರೆ ಉಂಟಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಭೇಟಿ ನೀಡಿದ್ದರು. ಇಲಾಖೆಯ ಅಧಿಕಾರಿಗಳು ಮನೆಗಳ ಕುಸಿತಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.