ಮಡಿಕೇರಿ, ಆ. 29 : ಮಡಿಕೇರಿಯ ನವೋದಯ ಶಾಲೆಯಲ್ಲಿ ಭೂಕಂಪ ಅಳತೆಮಾಡುವ ಯಂತ್ರವಾದ ಸೆಸ್ಮೋಗ್ರಾಫ್ ಅಳವಡಿಸಿದ್ದು ಮೂರು ದಿನಗಳಿಂದ ಸಣ್ಣಪ್ರಮಾಣದ ಕಂಪನವಾಗುತ್ತಿದೆ ಎಂದು ನ್ಯಾಷನಲ್ ಜಿಯೋಫಿಸಿಕಲ್ ಇನ್ಸ್ಟಿಟ್ಯೂಷನ್‍ನ (ಎನ್‍ಜಿಆರ್‍ಐ) ನ ಹಿರಿಯ ವಿಜ್ಞಾನಿ ರಾಘವನ್ ತಿಳಿಸಿದ್ದಾರೆ.

“ಈ ಸೆಸ್ಮೋಗ್ರಾಫ್ ಯಂತ್ರವು ಅತೀ ಸೂಕ್ಷ್ಮ ಶಬ್ಧಗಳನ್ನು ದಾಖಲೆ ಮಾಡುವದರಿಂದ ಈ ಯಂತ್ರವನ್ನು ಮಾನವ ನಿರ್ಮಿತ ಶಬ್ಧಗಳಿಂದ ದೂರವಿಡಬೇಕಲ್ಲದೆ ಅತಿ ಸುರಕ್ಷಿತ ಜಾಗದಲ್ಲಿಡಬೇಕು. ಹಾಗಾಗಿ ಇದನ್ನು ಶಾಲೆಯ ಲ್ಯಾಬ್‍ನಲ್ಲಿ ಅಳವಡಿಸ ಲಾಗಿದೆ,” ಎಂದು ರಾಘವನ್ ‘ಶಕ್ತಿ’ಗೆ ತಿಳಿಸಿದರು.ಭೂಕುಸಿತದ ಸಮಯದಲ್ಲಿ ಜನರಿಗೆ ಭೂಮಿಯೊಳಗಿಂದ ಕೇಳಿಬಂದ ಜೋರಾದ ಶಬ್ಧದ ಕುರಿತು ಪ್ರಶ್ನಿಸಿದಾಗ, ಅವರು, “ಭೂಕುಸಿತಕ್ಕೂ ಭೂಕಂಪಕ್ಕೂ ಸಂಬಂಧವಿಲ್ಲ. ಆದರೂ ಜನರು ಭೂಮಿಯೊಳಗಿ ನಿಂದ ಬಂದ ಶಬ್ಧದ ಕುರಿತು ವಿವರಿಸಿದ್ದಾರೆ. ಇದನ್ನು ಸರಿಯಾಗಿ ತಿಳಿದು ಪರಿಶೀಲಿಸುವ ಸಲುವಾಗಿ ಸೆಸ್ಮೋಗ್ರಾಫ್ ಯಂತ್ರವನ್ನು ಕೊಡಗಿನಲ್ಲಿ ಅಳವಡಿಸಲಾಗಿದೆ,” ಎನ್ನುತ್ತಾ, “ಸಣ್ಣ ಪ್ರಮಾಣದ ಭೂ ಅದುರುವಿಕೆÉಯಿಂದ ಭಯ ಪಡಬೇಕಾಗಿಲ್ಲ. ನಾವು ಈ ಅದುರುವಿಕೆÉಗಳ ಬಗ್ಗೆ ತಿಳಿಯಲು ಹಾಗೂ ಭೂಮಿಯಲ್ಲಿನ ದೋಷ ಪೂರಿತ ಪ್ಲೇಟ್‍ಗಳನ್ನು ಗುರುತಿಸಲು ಯಂತ್ರವನ್ನು ಅಳವಡಿಸಿದ್ದೇವೆ,” ಎಂದರು.

ಇದಲ್ಲದೆ, ಈ ಸಣ್ಣ ಪ್ರಮಾಣದ ಭೂಕಂಪನ ‘ಹೈಡ್ರೊಸೆಸ್‍ಮಿಸಿಟಿ’ ಎನಿಸಿಕೊಂಡಿದ್ದು (ಮೊದಲ ಪುಟದಿಂದ) ಭೂಮಿಯೊಳಗಿನ ಅಂತರ್‍ಜಲ ಹೆಚ್ಚಾದಾಗ ಆಗುವ ಒತ್ತಡದಿಂದಾಗಿ ಭೂ ಕಂ¥ನÀ ಆಗಿರಬಹುದು ಎಂದು ಶಂಕಿಸಿದರೂ ಕೂಡ ಖಚಿತವಾಗಿ ಇನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾ, “ಹೈಡ್ರೊಸೆಸ್‍ಮಿಸಿಟಿ ನಿಂದ ಆಗಿರಬಹುದು, ಆದರೂ ಭೂಕುಸಿತ ಹಾಗೂ ಭೂಕಂಪ ಎರಡಕ್ಕೂ ಪರಸ್ಪರ ಸಂಬಂಧವಿಲ್ಲ. ಭೂಕುಸಿತದ ಬಗ್ಗೆ ಮಾಹಿತಿ ಪಡೆಯಲು ಬೇರೆ ನುರಿತ ವಿಜ್ಞಾನಿಗಳು ಬರುತ್ತಾರೆ,” ಎಂದು ನುಡಿದರು.

ಕೊಡಗಿನ ಸಂತ್ರಸ್ತ ಜನರ ಅನುಭವಗಳನ್ನು ಕೇಳಿದಾಗ ಹೈಡ್ರೊಸೆಸ್‍ಮಿಸಿಟಿಯ ವೈಜ್ಞಾನಿಕ ಲಕ್ಷಣಗಳಿಗೆ ಹೋಲಿಕೆಯಾದರೂ ವಿಜ್ಞಾನಿ ರಾಘವನ್ ಇದರ ಬಗ್ಗೆ ಇನ್ನೂ ಹೆಚ್ಚ್ಚಿನ ಸಂಶೋಧನೆಯ ಅಗತ್ಯವಿದೆ ಎನ್ನುತ್ತಾರೆ. ಆದರೂ, ಜಿಯೋಫಿಸಿಕಲ್ ಇಂಟರ್‍ನ್ಯಾಷನಲ್ ಜರ್ನಲ್ ಪ್ರಕಾರ 2011 ನಲ್ಲಿ ಗುಜರಾತಿನಲ್ಲಾದ ಭೂಕಂಪಕ್ಕೆ ಮಳೆ ಹಾಗೂ ಅಲ್ಲಿಯ ಅಣೆಕಟ್ಟ್ಟೆಗೆ ಸೇರಿದ ನೀರಿನ ಅಧಿಕ ಪ್ರಮಾಣವೇ ಕಾರಣವೆಂದು ತಿಳಿಸಲಾಗಿದೆ. ಆದರೂ ಕೊಡಗಿನ ಭೂ ಕುಸಿತಕ್ಕೆ ಕಾರಣವನ್ನು ವಿಜ್ಞಾನಿಗಳು ಇನ್ನೂ ಪರಿಶೋಧನೆ ನಡೆಸಿ ದೃಢೀಕರಿಸಬೇಕಾಗಿದೆ ಎಂದರು. - ಪ್ರಜ್ಞಾ