ಆಲೂರುಸಿದ್ದಾಪುರ, ಆ. 29: ಆಲೂರುಸಿದ್ದಾಪುರ ವಿಜಯ ಯುವಕ ಸಂಘದ ವತಿಯಿಂದ ಕಳೆದ 65 ವರ್ಷಗಳಿಂದ ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ನಡೆಸಿಕೊಂಡು ಬರುತ್ತಿದ್ದ ಕ್ರೀಡಾಕೂಟವನ್ನು ಕೊಡಗು ಪ್ರಕೃತಿವಿಕೋಪದಿಂದಾಗಿ ಕೊಡಗಿನ ಜನರು ಕಷ್ಟ ಎದುರಿಸುತ್ತಿರುವ ಹಿನೆÀ್ನಲೆಯಲ್ಲಿ ರದ್ದು ಪಡಿಸಲು ವಿಜಯ ಯುವಕ ಸಂಘ ತೀರ್ಮಾನಿಸಿದೆ. ಈ ಕುರಿತು ನಡೆದ ಸಂಘದ ಸಭೆಯಲ್ಲಿ ಸೆ.3 ರಂದು ಕೈಲ್ ಮಹೂರ್ತ ಹಬ್ಬದ ಪ್ರಯುಕ್ತ ಆಲೂರುಸಿದ್ದಾಪುರ ಸರಕಾರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ನಡೆಸುವಂತೆ ಈ ಹಿಂದೆಯೇ ತೀರ್ಮಾನಿಸಲಾಗಿತ್ತು ಆದರೆ, ಇದೀಗ ಪ್ರಕೃತಿವಿಕೋಪ ದಿಂದಾಗಿ ಜನರು ಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ 65 ವರ್ಷಗಳಿಂದಲೂ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ನಡೆಸಿಕೊಂಡು ಬರುತ್ತಿದ್ದ ಕ್ರೀಡಾಕೂಟವನ್ನು ಈ ವರ್ಷ ರದ್ದುಪಡಿಸುವಂತೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.