ವೀರಾಜಪೇಟೆ, ಅ. 29: ಕೊಡಗಿನಲ್ಲಿ ಸಂಭವಿಸ ಬಾರದಂತಹ ಅತಿ ದು:ಖ ಭರಿಸುವಂತಹ ದುರಂತ ಸಂಭವಿಸಿ ಅನೇಕರು ಆಸ್ತಿ ಪಾಸ್ತಿ ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ.
ಇದರಲ್ಲಿ ದೈವ ಪರೀಕ್ಷೆಯೂ ನಡೆದಿದ್ದು ಈಗ ಸಂತ್ರಸ್ತರೆಲ್ಲರೂ ದೈವಶಕ್ತಿ ಧೈರ್ಯದಿಂದ ಬದುಕನ್ನು ಮುನ್ನಡೆಸಬೇಕಾಗಿದೆ, ನೋವಿನಲ್ಲಿಯೂ ನಗುವನ್ನು ಬೀರುವಂತಾಗಬೇಕು. ಸಂತ್ರಸ್ತರಿಗೆ ಎಲ್ಲ ರೀತಿಯಿಂದಲೂ ಸಹಾಯ ಹಸ್ತ ನೀಡುವದರೊಂದಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೊಡಗಿನ ವೀರಾಜಪೇಟೆಯ ಬಹುಭಾಷಾ ನಟಿ ರಷ್ಮಿಕಾ ಮಂದಣ್ಣ ಹೇಳಿದರು.
ಕಳೆದ ಹದಿನೈದು ದಿನಗಳ ಹಿಂದೆ ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅನೇಕ ಮಂದಿ ನಿರಾಶ್ರಿತರಾದ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಸರಳ ಸಮಾರಂಭದಲ್ಲಿ ಭಾಗವಹಿಸಿದ್ದ ರಷ್ಮಿಕಾ ಮಂದಣ್ಣ ಕೊಡಗು ಯೋಧರನಾಡು ಯಾವದೇ ಅನಾಹುತ, ದುರಂತ, ಸಂಭವಿಸಿದರೂ ಧೈರ್ಯದಿಂದ ಎದುರಿಸುವ ಶಕ್ತಿ ಕೊಡಗಿನವರಿಗೆ ಇದೆ. ಕೊಡಗಿನ ಮರು ನಿರ್ಮಾಣಕ್ಕೆ ಎಲ್ಲರೂ ಜಾತಿ ಮತ ಬೇಧ ಭಾವವಿಲ್ಲದೆ ಒಮ್ಮತದಿಂದ ಪಣತೋಡೋಣ. ರಾಜ್ಯದ ಫಿಲಂ ಉದ್ಯಮ ಸಂಸ್ಥೆ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಕೊಡಗಿನ ದುರಂತಕ್ಕೆ ಸಹಾಯ ಹಸ್ತ ನೀಡುತ್ತೇವೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆದ ದುರಂತಕ್ಕೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯಧನ ನೀಡಿದ್ದೇನೆ. ಕೊಡಗಿನ ಸಂತ್ರಸ್ತರನ್ನು ಖುದ್ದು ಭೇಟಿ ಮಾಡಿ ಸಾಂತ್ವನ ಹೇಳುವದರೊಂದಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಸಮಾರಂಭದಲ್ಲಿ ಭಾಗಿಯಾಗಿದ್ದು, ಉಳಿದ ಸಂತ್ರಸ್ತರಿಗೆ ಸದÀ್ಯದಲ್ಲಿಯೇ ಮತ್ತೊಂದು ಹಂತದಲ್ಲಿ ಸಹಾಯ ಹಸ್ತ ನೀಡಲಾಗುವದು ಎಂದರು.
ಸಮಾರಂಭದಲ್ಲಿ ಭಾಗಿಯಾದ ಕಾಂಡನಕೊಲ್ಲಿ ಪ್ರೇಮ, ಮೇಘತ್ತಾಳುವಿನ ವ್ಯಕ್ತಿ ಚಿನ್ನಪಂಡ ಸಾವಿತ್ರಿ, ಕಾಲೂರು ಗ್ರಾಮದ ಐಲಪಂಡ ಕವಿತಾ, ಹೆಬ್ಬೆಟ್ಟಗೇರಿ ಗ್ರಾಮದ ಎಂ.ಗಣಪತಿ, ತಾ. 15ರಂದು ಬುಧವಾರ ರಾತ್ರಿ ಭಾರೀ ಮಳೆಯಿಂದ ಪ್ರಕೃತಿ ವಿಕೋಪದ ದುರಂತದ ಅನುಭವವನ್ನು ಸಂಕ್ಷಿಪ್ತವಾಗಿ ವಿವರಿಸಿ ಸಭೆಯಲ್ಲಿ ಹಂಚಿಕೊಂಡರಲ್ಲದೆ, ಸಭೆಯ ಮುಂದೆ ಕಣ್ಣೀರು ಹಾಕಿದರು.
ವೀರಾಜಪೇಟೆ ಸೆರಿನಿಟಿ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ರಷ್ಮಿಕಾ ಮಂದಣ್ಣ 31 ಮಂದಿಗೆ ತಲಾ ರೂ 10,000 ನೆರವು ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಾಮಾಡ ರಮೇಶ್ ಕುಟ್ಟಪ್ಪÀ ಕೆಲವು ದಿನಗಳ ಹಿಂದ ಕೊಡಗು ಕಂಡರಿಯದ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಉದಾರಿಗಳಾದ ಕೊಡಗಿನ ಸಂತ್ರಸ್ತರು ಬೇರೆಯವರಿಂದ ಸಹಾಯಹಸ್ತವನ್ನು ನಿರೀಕ್ಷಿಸುವ ಪರಿಸ್ಥಿತಿ ಬಂದೊದಗಿದೆ. ಇಂತಹ ಸ್ಥಿತಿ ಕೊಡಗಿಗೆ ಬರಬಾರದು ಎಂದು ನೊಂದು ಹೇಳಿದರು.
ವೇದಿಕೆಯಲ್ಲಿ ಸೆರಿನಿಟಿ ಹಾಲ್‍ನ ಮಾಲೀಕ ಮುಂಡಚಾಡೀರ ಮದನ್ ಮಂದಣ್ಣ ಉಪಸ್ಥಿತರಿದ್ದರು. ಎಂ.ಎಂ.ಶಶಿಧರನ್ ನಿರೂಪಿಸಿದರು.
ವೀರಾಜಪೇಟೆ ಲೋಕೇಶ್ ಟಿ.ಪಿ,ಲೀಲಾ ಸರಸು, ಕುಮಾರ್, ಚಾಮಿ, ಮುಕ್ಕೊಡ್ಲುವಿನ ನಂದಿರ ಸೋಮಯ್ಯ, ತಂಬುಕುತ್ತಿರ ಸುರೇಶ್, ಮಕ್ಕಂದೂರು ಮೇಘತ್ತಾಳು ಗ್ರಾಮದ ಚೆನ್ನಪಂಡ ರತನ್‍ಕುಮಾರ್, ಚೆನ್ನಪಂಡ ಪೊನ್ನಪ್ಪ, ಚೆನ್ನಪಂಡ ಮುತ್ತಣ್ಣ, ಚೆನ್ನಪಂಡ ಸೋಮಯ್ಯ, ಚೆನ್ನಪಂಡ ಗಣಪತಿ, ವೀರಾಜಪೇಟೆ ಬೋಯಿಕೇರಿಯ ನೀಲಮ್ಮ, ಚೆನ್ನಪಂಡ ಜೂಬಿ, ತಾರಾ, ರಜನಿ, ಹರೀಶ್, ಮಕ್ಕಂದೂರು ಕಾಂಡನಕೊಲ್ಲಿಯ ರಮೇಶ್, ಚೆನಿಯಪ್ಪ, ವೆಂಕಪ್ಪ, ಉದಯಗಿರಿ ಮುಕ್ಕೋಡ್ಲುವಿನ ದೇವಕಿ, ರಾಮಚಂದ್ರ, ರಾಮಣ್ಣ, ಸರೋಜ, ಮಡಿಕೇರಿ ಹೆಬ್ಬೆಟಗೇರಿಯ ಮಿನ್ನಂಡ ಮೋಟಯ್ಯ, ಮಿನ್ನಂಡ ಮಿಟ್ಟು, ಚೆಟ್ಟಿರ ಪೂವವ್ವ ಚೆಟ್ಟಿರ ಚಂಬವ್ವ, ಮಾದಾಪುರ ಇಗ್ಗೋಡ್ಲುವಿನ ಜಗ್ಗಾರಂಡ ಕಾವೇರಪ್ಪ, ಮಾದಾಪುರ ಮೂವತೊಕ್ಲುವಿನ ಮುಕ್ಕಾಟಿರ ತಂಗಮ್ಮ, ಮಕ್ಕಂದೂರುವಿನ ಶಾಂತೆಯಂಡ ತಿಮ್ಮಯ್ಯ ಅವರುಗಳನ್ನು ಗುರುತಿಸಿ ಸಹಾಯಸ್ತ ನೀಡಲಾಯಿತು.