ಕುಶಾಲನಗರ, ಆ. 29: ಕುಶಾಲನಗರ ಬಳಿಯ ಕೊಪ್ಪ ಕಾವೇರಿ ಸೇತುವೆ ಮೇಲಿಂದ ನದಿಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಕೊಪ್ಪ ಗ್ರಾಮದ ರಾಮಯ್ಯ ಎಂಬವರ ಮಗ ಲೋಕೇಶ್ (28) ಕಾವೇರಿ ನದಿಗೆ ಹಾರಿ ನೀರುಪಾಲಾದ ವ್ಯಕ್ತಿ.
ಕಳೆದ ಹಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಲೋಕೇಶ್ ವಿಪರೀತ ಮದ್ಯಪಾನಕ್ಕೆ ಒಳಗಾಗಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮೃತದೇಹ ಪತ್ತೆಗಾಗಿ ದುಬಾರೆ ರ್ಯಾಫ್ಟಿಂಗ್ ತಂಡದವರು ನದಿಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.