ಮಡಿಕೇರಿ, ಆ. 29: ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕೆಲವು ನಿಜವಾದ ಸಂತ್ರಸ್ತರ ಪಾಲಾಗಿದ್ದರೆ, ಇನ್ನು ಕೆಲವು ಎಲ್ಲೆಲ್ಲೋ ಹೋಗಿವೆ. ಕೆಲವರಿಗೆ ಯಾರಿಗೆ ತಲಪಿಸಬೇಕೆಂಬದೇ ತಿಳಿಯದೇ ಅಲ್ಲಲ್ಲೇ ಹೋಗಿ ಬಿದ್ದಿದೆ. ಆದರೆ ಇಲ್ಲಾರೋ ತಂದ ಬಟ್ಟೆಗಳನ್ನು ಇಂದಿರಾನಗರ ಬಳಿ ರಾಶಿ ಹಾಕಿ ಹೋಗಿದ್ದಾರೆ. ಬಟ್ಟೆಗಳೆಲ್ಲ ಮಳೆಯಲ್ಲಿ ಒದ್ದೆಯಾಗಿದ್ದು, ನಾಯಿಯೊಂದು ಬೆಚ್ಚಗಿನ ಆಶ್ರಯಕ್ಕಾಗಿ ಆತುಕೊಂಡಿದೆ.