ಮಡಿಕೇರಿ, ಆ. 29: ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ತರಿಗೆ ಪರಿಹಾರ ಕೇಂದ್ರದ ಕೊರತೆ ಇದ್ದಲ್ಲಿ ಕೊಂಡಂಗೇರಿ ಶಿಫಾ ಕೇಂದ್ರವನ್ನು ಬಿಟ್ಟು ಕೊಡುವದಾಗಿ ಶಿಫಾ ಕೇಂದ್ರದ ಮುಖ್ಯಸ್ಥ ಸಿ.ಬಿ. ಮುಹಮ್ಮದ್ ಬಾಬಾ ತಿಳಿಸಿದ್ದಾರೆ.
ಶಿಫಾ ಕೇಂದ್ರದಲ್ಲಿ ನೂರಕ್ಕೂ ಅಧಿಕ ಮಂದಿ ತಂಗಲು ಅವಕಾಶವಿದ್ದು, ಮೂಲಭೂತ ಸೌಲಭ್ಯಗಳಾದ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ, ವಿಶಾಲವಾದ ಕೊಠಡಿಗಳು ಲಭ್ಯವಿದ್ದು, ಯಾವದೇ ಬೇಧ ಭಾವಗಳಿಲ್ಲದೆ ಅರ್ಹ ಸಂತ್ರಸ್ತರು ಇಲ್ಲಿ ತಂಗಲು ಅವಕಾಶವಿರುವದಾಗಿ ಮುಹಮ್ಮದ್ ಬಾಬ ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ 9483621069.