ಸುಂಟಿಕೊಪ್ಪ, ಆ. 29: ಜಲ ಪ್ರಳಯದಿಂದ ಮನೆ, ಆಸ್ತಿ ಕಳೆದುಕೊಂಡು ಸುಂಟಿಕೊಪ್ಪದ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿದ್ದ ಸಂತ್ರಸ್ತರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.

ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಭೇಟಿ ಮಾಡಿ ಸಂತ್ರಸ್ತರನ್ನು ಮಾತನಾಡಿಸಿ ಕಂದಾಯ ಅಧಿಕಾರಿಗಳೊಂದಿಗೆ ಪುನರ್ವಸತಿ ಕುರಿತು ಚರ್ಚಿಸಿದರು.

ಪುನರ್ವಸತಿ ಕೇಂದ್ರಗಳಿಂದ ಮಕ್ಕಳು ಶಾಲೆಗಳಿಗೆ ತೆರಳುವಂತೆ ಪಕ್ಕದಲ್ಲಿಯೇ ಇರುವ ಹಾಸ್ಟೆಲ್‍ಗಳು, ಮೊರಾರ್ಜಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಲು ಕೆಲವು ಪೋಷಕರು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ಇದರ ಬಗ್ಗೆ ಜಿಲ್ಲಾಡಳಿತದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು