*ವೀರಾಜಪೇಟೆ, ಆ. 30: ಆರ್ಜಿ ಪಂಚಾಯಿತಿ ಪಿಡಿಓ ಸತೀಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು ಮಾಸಿಕ ಸಭೆಯನ್ನು ಬಹಿಷ್ಕರಿಸಿ ಪಿಡಿಓಗೆ ಧಿಕ್ಕಾರ ಕೂಗಿ ಹೊರ ನಡೆದ ಘಟನೆ ಇಂದು ನಡೆಯಿತು.
ಆರ್ಜಿ ಪಂಚಾಯಿತಿ ಮಾಸಿಕ ಸಭೆಯು ಅಧ್ಯಕ್ಷೆ ಗಾಯತ್ರಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಲವಕುಮಾರ್ ತಾ. 8 ರಂದು ನಡೆದ ಗ್ರಾಮ ಸಭೆಯಲ್ಲಿ ಪೆರಂಬಾಡಿ ಬಳಿ ಮೀಸಲು ಅರಣ್ಯದ ಒತ್ತಿನಲ್ಲಿ ಮನೆ ದಳಕ್ಕೆ ನೀಡಿರುವ ಪರವಾನಿಗೆಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಗೊಂಡಿದೆ, ಅದನ್ನು ಕೂಡಲೇ ತೆರವುಗೊಳಿಸಬೇಕು ಎಂದು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡು ವಂತೆ ಸಭೆಯಲ್ಲಿ ವ್ಯಕ್ತವಾಗಿದೆ. ಈ ವಿಚಾರ ಏನಾಯಿತು ಎಂದು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಗಾಯತ್ರಿ ತಾನು ಕೂಡ ಜಿಲ್ಲಾಧಿಕಾರಿಯಿಂದ ಏನು ಉತ್ತರ ಬಂದಿದೆ ಎಂದು ಪ್ರಶ್ನಿಸಿದ್ದೇನೆ. ಪಿಡಿಓ ಎಲ್ಲವನ್ನು ನಿಮಗೆ ಹೇಳಬೇಕಿಲ್ಲ. ಉಪಾಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದಾಗ ಉಪಾಧ್ಯಕ್ಷ ರಮೇಶ್ ತನಗೆ ಯಾವಾಗ ಹೇಳಿದ್ದೀರಿ ಎಂದು ಏರು ಧ್ವನಿಯಲ್ಲಿ ಕೇಳಿದಾಗ ಮಾತಿಗೆ ಮಾತು ಬೆಳೆದು ಕೈ-ಕೈ ಮೀಲಾಯಿಸುವ ಹಂತ ತಲುಪಿ ಇಬ್ಬರು ಏಕವಚನ ಪ್ರಯೋಗ ಮಾಡಿದರು. ಇದೇ ಸಂದರ್ಭ ಪಿಡಿಓ ವರ್ತನೆ ಬಗ್ಗೆ ಧಿಕ್ಕಾರ ಕೂಗಿದರು.
ಕೃಷಿ ಭೂಮಿಯಲ್ಲಿ ವಿದ್ಯಾಸಂಸ್ಥೆ ನಿರ್ಮಾಣಗೊಂಡಿದೆ. 2007 ರಿಂದಲೇ ನ್ಯಾಯಾಲಯದ ಮೆಟ್ಟಿಲೇ ರಿದ್ದು ರಾಜ್ಯ ಉಚ್ಚ ನ್ಯಾಯಾಲಯ ಪಿಲ್ಲರ್ ನಿರ್ಮಾಣ ಮಾಡಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕು ಎಂದು ಆದೇಶ ನೀಡಿದೆ. ಸಂಸ್ಥೆಯವರು ನ್ಯಾಯಾಲ ಯದ ಆದೇಶವನ್ನು ಧಿಕ್ಕರಿಸಿ ಪಿಲ್ಲರ್ ನಿರ್ಮಾಣ ಮಾಡದೇ ಕಟ್ಟಡ ನಿರ್ಮಿಸಿದ್ದಾರೆ. ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ಗ್ರಾಮ ಸಭೆಗಳಲ್ಲಿ ಮನವರಿಕೆ ಮಾಡಿಕೊಟ್ಟರೂ ಪಂಚಾಯಿತಿಯಿಂದ ಸ್ಕೇಚ್ ಹಾಗೂ ನಿರಾಪೇಕ್ಷಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿ ಪಿಡಿಓ ರನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ಪಿಡಿಓ ತಾನೋರ್ವ ಸರ್ಕಾರಿ ಅಧಿಕಾರಿ ಎಂಬದನ್ನು ಮರೆತು ಸಾರ್ವಜನಿಕರ ರೀತಿಯಲ್ಲಿ ವರ್ತಿಸಿರುವದು ಸಭೆ ಬಹಿಷ್ಕಾರಕ್ಕೆ ಮತ್ತೊಂದು ಸಾಕ್ಷಿಯಾಯಿತು.
ಉಪಾಧ್ಯಕ್ಷ ರಮೇಶ್ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸಗಳು ಯಾವದೂ ಆಗುತ್ತಿಲ್ಲ. ಜನಪ್ರತಿನಿಧಿಯಾಗಿ ನಮ್ಮಿಂದ ನಮ್ಮ ಗ್ರಾಮಗಳಿಗೆ ಯಾವದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಪಿಡಿಓ ಏಕಪಕ್ಷಿ ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಅಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ಪಿಡಿಓ ನಮಗೆ ಬೇಕಾಗಿಲ್ಲ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ ಎರಡು ಸದಸ್ಯರು ಹೊರತು ಪಡಿಸಿ ಉಳಿದ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು. 10 ಸದಸ್ಯ ಬಲದ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.