*ಸುಂಟಿಕೊಪ್ಪ, ಆ. 30: ಅತಿವೃಷ್ಟಿಯಿಂದ ಜನತೆ ಕಂಗಾಲಾಗಿದ್ದು, ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ; ಇಂತಹ ಪರಿಸ್ಥಿತಿಯ ಲಾಭವನ್ನು ಕೆಲ ದುರುಳರು ಬಳಸಿಕೊಂಡು ರಾತ್ರಿ ವೇಳೆ ಸಾಕು ಪ್ರಾಣಿ ಹಾಗೂ ವಾಹನವನ್ನು ಕಳ್ಳತನ ಮಾಡುವ ಮೂಲಕ ಕೈ ಚಳಕ ತೋರಿದ್ದಾರೆ. ಕೆÀದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ನೇ ಮೈಲಿನ ರಾಷ್ಟ್ರೀಯ ಹೆದ್ದಾರಿ ಬಳಿಯ ನಿವಾಸಿ ಅಬೂಬಕ್ಕರ್ ಅವರಿಗೆ ಸೇರಿದ 2 ಆಡುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದನ್ನು ರಾತ್ರಿ ವೇಳೆ ಕಳ್ಳರು ಕದ್ದೊಯ್ದಿದ್ದಾರೆ. ಅದೇ ದಿನ ರಾತ್ರಿ 7 ನೇ ಮೈಲಿನಲ್ಲಿ ಮನೆ ಒತ್ತಿನಲ್ಲಿ ನಿಲ್ಲಿಸಿದ್ದ (ಕೆಎ.55 ಜೆ.3455) ಮೋಟಾರ್ ಬೈಕ್ ಅನ್ನು ಕಳ್ಳರು ಅಪಹರಿಸಿದ್ದಾರೆ. ಆಡಿನ ಮೌಲ್ಯ 40 ಸಾವಿರ ರೂ. ಹಾಗೂ ಬೈಕಿನ ಮೌಲ್ಯ 1.25000 ರೂ. ಎಂದು ಮಾಲೀಕರು ತಿಳಿಸಿದ್ದಾರೆ.ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.