ಬೆಂಗಳೂರು, ಆ. 30: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೆ ಒಳಗಾದ ಕೊಡಗು ಮತ್ತು ಇತರ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲೆಂದು ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ 2018ರ ಖಾತೆಗೆ ತಾ. 29 ರವರೆಗೂ ಸಲ್ಲಿಕೆಯಾಗಿರುವ ದೇಣಿಗೆ ಮೊತ್ತದ ವಿವರ ಕೆಳಗಿನಂತಿದೆ.
ಧನಾದೇಶ/ ಡಿ.ಡಿ.ಗಳ ಮೂಲಕ ಸಲ್ಲಿಕೆಯಾಗಿರುವ ಮೊತ್ತ : ರೂ. 24,33,93,958.00 (ಒಟ್ಟು 490 ಧನಾದೇಶ/ ಡಿ.ಡಿ ಗಳ ಮೂಲಕ ಸಲ್ಲಿಕೆಯಾಗಿದೆ)
ಆನ್ಲೈನ್ (Pಚಿಥಿ ಖಿಒ ಒಳಗೊಂಡಂತೆ) ಖಾತೆಗೆ ಸಲ್ಲಿಕೆಯಾಗಿರುವ ಮೊತ್ತ : ರೂ.11,68,87,900.90. ಒಟ್ಟು : ರೂ36,02,81,858.90.
ರಾಜ್ಯದಲ್ಲಿನ ಪ್ರಕೃತಿ ವಿಕೋಪ / ಅತಿವೃಷ್ಟಿಯಲ್ಲಿ ನೊಂದ ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಮುಖ್ಯಮಂತ್ರಿಯವರ ಈ ಕೆಳಕಂಡ ಪರಿಹಾರ ನಿಧಿ ಪ್ರಕೃತಿ ವಿಕೋಪ 2018ರ ಖಾತೆಗೆ ದೇಣಿಗೆ ಸಲ್ಲಿಸಬಹುದಾಗಿರುತ್ತದೆ.
ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ವಿಧಾನ ಸೌಧ ಶಾಖೆ. ಖಾತೆ ಸಂಖ್ಯೆ : 37887098605. ಐ.ಎಫ್.ಎಸ್.ಸಿ. ಕೋಡ್ : ಎಸ್ಬಿಐಎನ್ 0040277. ಎಂ.ಐ.ಸಿ.ಆರ್. ಸಂಖ್ಯೆ : 560002419