ಚೆಟ್ಟಳ್ಳಿ, ಆ. 30: ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾದಾಪುರದ ಸಮೀಪ ಹಾಡಗೇರಿ ಮೂವತ್ತೋಕ್ಲು ಕುಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ತಮ್ಮ ಸಂಕಷ್ಟಗಳನ್ನು ಅವರಲ್ಲಿ ತೋಡಿಕೊಂಡರು.

ಪರಿಹಾರ ಕೇಂದ್ರಗಳಲ್ಲಿ ಬೇಕಾದಷ್ಟುಅಕ್ಕಿ ಹಾಗೂ ದಿನಸಿ ಸಾಮಗ್ರಿಗಳು ವಿತರಣೆ ಗೊಳ್ಳುತ್ತಿದ್ದು, ತಮಗೆ ದೊರೆಯುತ್ತಿಲ್ಲವೆಂದರು. ರಾಜ್ಯ ರೈತ ಸಂಘ ತಮ್ಮ ಕೋರಿಕೆ ಮೇರೆಗೆ ಜಿಲ್ಲೆಯ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಲು ಸಹಕಾರ ನೀಡಲಿದೆ ಎಂದು ಮನು ಸೋಮಯ್ಯ ಹೇಳಿದರು.

ನೆರೆದಿದ್ದ ಮೂವತ್ತು ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಒದಗಿಸಲು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಅವರು ಸಹಕರಿಸಿದ್ದು, ಅಂತೆಯೇ ಸಂತ್ರಸ್ತರಿಗೆ ದಿನಸಿ ಸಾಮಾನು, ದಿನನಿತ್ಯದ ಅವಶ್ಯಕತೆಯ ವಸ್ತುಗಳು, ಬಟ್ಟೆ-ಬರೆ ಹಾಗೂ ಕಂಬಳಿ ಇತ್ಯಾದಿಗಳನ್ನು ವಿತರಿಸಲಾಯಿತು. ನೆಲ್ಲಮಕ್ಕಡ ವಿವೇಕ್, ರೈತ ಸಂಘದ ಪ್ರಮುಖರಾದ ಮಂಡೇಪಂಡ ಪ್ರವೀಣ್ ಬೋಪಯ್ಯ, ಪಳೆಯಂಡ ಕೃಪಾನ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಪುತ್ತರಿರ ಪಪ್ಪು ತಿಮ್ಮಯ್ಯ, ಸಮಾಜದ ಪ್ರಮುಖರಾದ ಚೋವಂಡ ಕಸ್ತೂರಿ ಮುಂತಾದವರು ಹಾಜರಿದ್ದರು.

- ಪಪ್ಪು ತಿಮ್ಮಯ್ಯ.